ವಾಣಿಜ್ಯ ಸಿಲಿಂಡರ್‍ಗಳಿಗೆ ರೀಫಿಲಿಂಗ್ ಮಾಡುತ್ತಿದ್ದ ಮೂವರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Gas-Filling--02

ಬೆಂಗಳೂರು,ಅ.25- ಗೃಹಬಳಕೆಯ ಗ್ಯಾಸ್ ಸಿಲಿಂಡರ್‍ಗಳನ್ನು ಕಮರ್ಷಿಯಲ್ ಸಿಲಿಂಡರ್‍ಗಳಿಗೆ ರೀಫಿಲಿಂಗ್ ಮಾಡಿ ಮಾರಾಟ ಮಾಡುತ್ತಿದ್ದ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.  ಚಿಕ್ಕಬಳ್ಳಾಪುರ ಜಿಲ್ಲೆಯ ಸುನೀಲ್‍ಕುಮಾರ್, ಕನಕಪುರದ ಶಿವರಾಜ್, ಬೆಂಗಳೂರಿನ ಗವಿಪುರಂ ಗುಟ್ಟಹಳ್ಳಿಯ ಲಕ್ಷ್ಮಣಗೌಡ ಬಂಧಿತರು.   ಕೆಂಗೇರಿ ವ್ಯಾಪ್ತಿಯ ಉತ್ತರಹಳ್ಳಿಯ ಮುಖ್ಯರಸ್ತೆಯ ಕೋಡಿಪಾಳ್ಯದ ಗೋಡೌನ್‍ವೊಂದರಲ್ಲಿ ಗ್ಯಾಸ್ ಕಂಪನಿಗಳ ಗೃಹಬಳಕೆಯ ಸಿಲಿಂಡರ್‍ಗಳನ್ನು ವಾಣಿಜ್ಯ ಸಿಲಿಂಡರ್‍ಗಳಿಗೆ ಅಕ್ರಮವಾಗಿ ರೀಫಿಲಿಂಗ್ ಮಾಡಿ ಮಾರಾಟ ಮಾಡುತ್ತಿದ್ದನು.

ಈ ಸಂಬಂಧ ಸಿಸಿಬಿ ಪೊಲೀಸರು ಗೋಡೌನ್ ಮೇಲೆ ದಾಳಿ ಮಾಡಿ ಮೂವರನ್ನು ಬಂಧಿಸಿ 116 ಗ್ಯಾಸ್ ಸಿಲಿಂಡರ್‍ಗಳು, ರೀಫಿಲಿಂಗ್ ರಾಡುಗಳು, ತೂಕದ ಯಂತ್ರ ಹಾಗೂ ಇತರೆ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ದ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments

Sri Raghav

Admin