ಜೈಜಗದೀಶ್ ಪುತ್ರಿಯರ ಮೊದಲ ಸಿನಿ ‘ಯಾನ’

ಈ ಸುದ್ದಿಯನ್ನು ಶೇರ್ ಮಾಡಿ

yaanaa

ಜೈಜಗದೀಶ್‍ ವಿಜಯಲಕ್ಷ್ಮೀ ಸಿಂಗ್ ದಂಪತಿ ಮಕ್ಕಳಾದ ವೈಭವಿ, ವೈಸಿರಿ, ವೈನಿದಿ ಇದೇ ಮೊದಲಬಾರಿಗೆ ಒಂದೇ ಚಿತ್ರದಲ್ಲಿ ಅಭಿನಯಿಸಿರುವ `ಯಾನ’ದ ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಹಾಡುಗಳ ಚಿತ್ರಣ ಮಾತ್ರ ಬಾಕಿ ಇದೆ. ತಮ್ಮ ಮಕ್ಕಳನ್ನು ಗ್ಲಾಮರಸ್ ಪಾತ್ರದ ಮೂಲಕ ತೋರಿಸಲು ಮುಂದಾಗಿದ್ದಾರೆ. ಜೈಜಗದೀಶ್ ದಂಪತಿ ಈ ಚಿತ್ರದ ವಿಶೇಷ ಹಾಡೊಂದನ್ನು ಇತ್ತೀಚೆಗೆ ರಿಲೀಸ್ ಮಾಡಿದರು. ಈ ಹಾಡನ್ನು ನಟ ಸುದೀಪ್ ಅವರು ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು. ನಂತರ ಮಾತನಾಡುತ್ತಾ ಜೈಜಗದೀಶ್ ಅವರನ್ನು ನಾನು ಮಾಮ ಅಂತ ಮೊದಲಿನಿಂದಲೂ ಕರೆಯುತ್ತೇನೆ. ಅಪ್ಪ, ಜೈಜಗದೀಶ್ ನಾಯಕನಾಗಿರುವ “ಪವಿತ್ರ ಪಾಪಿ” ಎಂಬ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಸಿಂಗ್ ಮನೆತನದವರು ನಾಲ್ಕನೇ ತಲೆಮಾರಿನವರು ಆಗಿದ್ದರೆ, ನಾನು ಎರಡನೇ ತಲೆಮಾರಿಗೆ ಸೇರುತ್ತೇನೆ. ಪ್ರಾರಂಭದಲ್ಲಿ ಅವರು ನನ್ನ ಚಿತ್ರದ ಕಾರ್ಯಕ್ರಮಕ್ಕೆ ಬರುತ್ತಿದ್ದರು. ಇಂದು ಅವರ ಸಿನಿಮಾಗೆ ಬಂದಿರುವೆ. ಇಂತಹ ವಾತವರಣ ಯಾವಾಗಲೂ ಮುಂದುವರೆಯಬೇಕು. ಪ್ರಯಾಣ ಎಲ್ಲರ ಜೀವನದಲ್ಲಿ ಬಂದು ಹೋಗುತ್ತದೆ.
ಎಂದರಲ್ಲದೆ ಈ ವಿಶೇಷ ಗೀತೆಯನ್ನು ರಚಿಸಿ ಸಂಗೀತ ಒದಗಿಸಿ ಹಾಡಿರುವ ಹೊಸ ಪ್ರತಿಭೆ ಸಿದ್ದಾರ್ಥ್ ಅವರನ್ನು ನೋಡುತ್ತಾ ನಿಮ್ಮ ದೇಹ ಸೌಂದರ್ಯಕ್ಕಿಂತ ಕಂಠ ಚೆನ್ನಾಗಿದೆ. ಭವಿಷ್ಯ ಕೂಡ ಚೆನ್ನಾಗಿದೆ ಅದನ್ನು ರೂಪಿಸಿಕೊಳ್ಳಿ ಎಂಬ ಕಿವಿಮಾತು ಹೇಳಿದರು.
ನಾವು ಸುದೀಪ್ ಅವರ ಸಿನಿಮಾಗಳನ್ನು ನೋಡುತ್ತಾ ಬೆಳದವರು. ಸಿನಿಮಾ ಕುಟುಂಬದಿಂದ ಬಂದವರಾದರೂ ಈ ಬಗ್ಗೆ ಅಷ್ಟೇನು ಮಾಹಿತಿ ನಮಗೆ ತಿಳಿದಿರಲಿಲ್ಲ. ನಾವು ನಟನೆ ಮಾಡುವಾಗಲೇ ಎಲ್ಲಾ ಕಷ್ಟಗಳ ಬಗ್ಗೆ ಗೊತ್ತಾಯಿತು ಎಂದು ಮೂವರು ಸಹೋದರಿಯರಲ್ಲಿ ಒಬ್ಬ ರಾದ ವೈಭವಿ ಹೇಳಿದರು. ಈ ಚಿತ್ರದ ಕತೆ ಚೆನ್ನಾಗಿರುವುದಕ್ಕೆ ನಾನು ಪಾಲುದಾರರಾಗಿ ಒಪ್ಪಿಕೊಂಡಿದ್ದೇನೆ ಎಂದು ಹರೀಶ್ ಶೇರಿಗಾರ್ ಹೇಳಿದರು. ಯಾನ ಪ್ರಯಾಣ ನಮ್ಮ ಕುಟುಂಬಕ್ಕೆ 75 ವರ್ಷದಲ್ಲಿ 100 ಚಿತ್ರಗಳನ್ನು ನಿರ್ಮಾಣ ಮಾಡಿದಂತೆ ಆಗುತ್ತದೆ. ನಮ್ಮ ನಾಲ್ಕನೇ ತಲೆಮಾರು ಚಿತ್ರರಂಗಕ್ಕೆ ಬಂದಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಎಂದು ಅಕಾಡಮಿ ಅಧ್ಯಕ್ಷ ರಾಜೇಂದ್ರಸಿಂಗ್‍ಬಾಬು ಹೇಳಿದರು. ಮೊಮ್ಮಕ್ಕಳು ಚಿತ್ರರಂಗದಲ್ಲಿ ಒಳ್ಳೇ ಹೆಸರು ಮಾಡಲಿ ಎಂದು ಆರ್ಶೀವದಿಸಿದರು ಹಿರಿಯ ನಟಿ ಪ್ರತಿಮಾದೇವಿ. ಹಿರಿಯ ವಿತರಕ ಪಾಲ್ ಚಂದಾನಿ ಅವರ ಸಹಕಾರದಿಂದ 24 ಸಿನಿಮಾಗಳನ್ನು ನಿರ್ಮಾಣ ಮಾಡಿದ್ದೇವೆ, ಲಾಭ, ನಷ್ಟ ಎರಡನ್ನೂ ಕಂಡಿದ್ದೇವೆ ಎಂದು ನಟ, ನಿರ್ಮಾಪಕ ಜೈಜಗದೀಶ್ ಹೇಳಿದರು. ಚಿತ್ರದ ತಾಂತ್ರಿಕ ವರ್ಗದಲ್ಲಿ ಸಂಕಲನವನ್ನು ಕೆಂಪರಾಜ ಅರಸು, ಸಂಗೀತವನ್ನು ಜೋಶ್ವಾ ಶ್ರೀಧರ್, ಛಾಯಗ್ರಹಣವನ್ನು ಕರಂ ಚಾವ್ಲಾ ಮಾಡಿದ್ದಾರೆ.

Facebook Comments

Sri Raghav

Admin