ಡಿ.28-29 ಧರ್ಮಸ್ಥಳಕ್ಕೆ ಮೋದಿ ಭೇಟಿ, ಸಾರ್ವಜನಿಕರಿಗಿಲ್ಲ ಮಂಜುನಾಥನ ದರ್ಶನ

ಈ ಸುದ್ದಿಯನ್ನು ಶೇರ್ ಮಾಡಿ

Modi--02

ಮಂಗಳೂರು,ಅ.26- ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಅ.29 ರಂದು ಭೇಟಿ ಹಿನ್ನೆಲೆಯಲ್ಲಿ ಅ.28 ಮತ್ತು 29ರಂದು ಸಾರ್ವಜನಿಕರಿಗೆ ಮಂಜುನಾಥ ಸ್ವಾಮಿ ದರ್ಶನಕ್ಕೆ ಅವಕಾಶ ಇರುವುದಿಲ್ಲ ಎಂದು ಶ್ರೀ ಕ್ಷೇತ್ರ ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ಬಿಗಿ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕಾನುನೂ ಸುವ್ಯವಸ್ಥೆ ಎಡಿಜಿಪಿ ಅಲೋಕ್ ಮೋಹನ್, ನಕ್ಸಲ್ ನಿಗ್ರಹ ಪಡೆಯ ಕಾಮೊಂಡೋಗಳು ಆಗಮಿಸಿದ್ದು, ಹೆಚ್ಚಿನ ಭದ್ರತೆಗೆ 3 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ಇದರಲ್ಲಿ ಡಿವೈಎಸ್ಪಿ, ಇನ್‍ಸ್ಪೆಕ್ಟರ್ ,ಪಿಎಸ್‍ಐ ಸೇರಿ 300 ಹಿರಿಯ ಅಧಿಕಾರಿಗಳು ಇರಿದ್ದಾರೆ ಎಂದು ದಕ್ಷಿಣ ಕನ್ನಡ ಎಸ್ಪಿ ಸುಧೀರ್ ರೆಡ್ಡಿ ತಿಳಿಸಿದ್ದಾರೆ.

Facebook Comments

Sri Raghav

Admin