ಬಿಬಿಎಂಪಿ ಪಾರ್ಕ್ ಬಳಿ ಗಾಂಜಾ ಮಾರುತ್ತಿದ್ದ ವಿದೇಶಿ ಪ್ರಜೆ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Ganja--01

ಬೆಂಗಳೂರು,ಅ.26- ಬಿಬಿಎಂಪಿ ಪಾರ್ಕ್ ಬಳಿ ಗಾಂಜಾವನ್ನಿಟ್ಟುಕೊಂಡು ಮಾರಾಟ ಮಾಡುತ್ತಿದ್ದ ವಿದೇಶಿ ಪ್ರಜೆಯೊಬ್ಬನನ್ನು ಯಲಹಂಕ ಉಪನಗರ ಪೊಲೀಸರು ಬಂಧಿಸಿ 300 ಗ್ರಾಂ ಗಾಂಜಾ ಹಾಗೂ 95,200 ರೂ. ಹಣ, ಮೊಬೈಲ್ ವಶಪಡಿಸಿಕೊಂಡಿದ್ದಾರೆ. ಉಗಾಂಡಾದ ಮಗೂಲ(25) ಬಂಧಿತ ವಿದೇಶಿ ಪ್ರಜೆ. ಯಲಹಂಕ ಉಪನಗರ ವ್ಯಾಪ್ತಿಯ 4ನೆ ಹಂತ, ಎಸ್‍ಎಫ್‍ಎಸ್-208, ಬಿಬಿಎಂಪಿ ಪಾರ್ಕ್ ಬಳಿ ವಿದೇಶಿ ವ್ಯಕ್ತಿಯೊಬ್ಬ ಗಾಂಜಾ ಮಾರಾಟ ಮಾಡುತ್ತಿದ್ದಾನೆಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ.

ಅಪರ ಪೊಲೀಸ್ ಆಯುಕ್ತ ಹೇಮಂತ್‍ಕುಮಾರ್‍ಸಿಂಗ್ ಹಾಗೂ ಉಪಪೊಲೀಸ್ ಆಯುಕ್ತ ಗಿರೀಶ್ ಮಾರ್ಗದರ್ಶನದಲ್ಲಿ ಸಹಾಯಕ ಪೊಲೀಸ್ ಆಯುಕ್ತ ಪ್ರಭಾಕರ್ ಬಿ. ಬಾರ್ಕಿ, ಇನ್ಸ್‍ಪೆಕ್ಟರ್ ಮಂಜುನಾಥ್ ಮತ್ತು ಸಿಬ್ಬಂದಿಗಳ ತಂಡ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಉಗಾಂಡಾ ಮೂಲದ ಆರೋಪಿಯನ್ನು ಬಂಧಿಸಿದ್ದಾರೆ. ಈತ ಗಾಂಜಾವನ್ನು ಚಿಕ್ಕ ಚಿಕ್ಕ ಪ್ಯಾಕೆಟ್‍ಗಳಲ್ಲಿ ತುಂಬಿ ಮಾರಾಟ ಮಾಡುತ್ತಿದ್ದುದು ವಿಚಾರಣೆಯಿಂದ ತಿಳಿದುಬಂದಿದೆ.

Facebook Comments

Sri Raghav

Admin