ರಾಷ್ಟ್ರಪತಿ ಕೋವಿಂದ್ ಗಮನ ಸೆಳೆದ ವಿಧಾನಸೌಧದ ಹುಲ್ಲು ಹಾಸು

ಈ ಸುದ್ದಿಯನ್ನು ಶೇರ್ ಮಾಡಿ

Vidhanasoudha--01

ಬೆಂಗಳೂರು, ಅ.26-ವಿಧಾನಸೌಧ ಸುತ್ತ ಮುತ್ತಲಿನ ಹುಲ್ಲುಹಾಸು ಮತ್ತು ಗಾರ್ಡನ್‍ನಿಂದ ಆಕರ್ಷಿತರಾದ ರಾಷ್ಟ್ರಪತಿ ಭವನದ ಕಾರ್ಯ ದರ್ಶಿಯವರು, ದೆಹಲಿಯಲ್ಲಿರುವ ರಾಷ್ಟ್ರಪತಿ ಭವನದ ಆವರಣದಲ್ಲೂ ಇದೇ ರೀತಿ ಉದ್ಯಾನ ವಿನ್ಯಾಸ ಮಾಡಲು ತೋಟಗಾರಿಕಾ ಇಲಾಖೆ ಕಾರ್ಯದರ್ಶಿಗೆ ಆಹ್ವಾನ ನೀಡಿದ್ದಾರೆ. ಇದು ನಮಗೆ ಹೆಮ್ಮೆಯ ವಿಷಯ ಎಂದು ತೋಟಗಾರಿಕಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದರು. ತೋಟಗಾರಿಕಾ ಇಲಾಖೆ ಅಧಿಕಾರಿಗಳಿಗೆ ಹನಿ ನೀರಾವರಿ ಯೋಜನೆಯ ಅನುಷ್ಠಾನದ ಬಗ್ಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ರಾಷ್ಟ್ರಪತಿ ಭವನದಲ್ಲಿ ಹುಲ್ಲುಹಾಸು, ಪುಷ್ಪೋದ್ಯಾನವನ್ನು ವಿನ್ಯಾಸಗೊಳಿಸಿಕೊಡಬೇಕು. ಇದು ಹೆಮ್ಮೆ ತರುವ ವಿಷಯ. ಅಧಿಕಾರಿಗಳು ದೆಹಲಿಗೆ ಹೋಗಿ ಗಾರ್ಡನ್ ವಿನ್ಯಾಸಗೊಳಿಸಿಕೊಡುವಂತೆ ಸಚಿವರು ಸೂಚಿಸಿದರು.

ರೈತರಿಗೆ ತಿಳಿಸಿ:

ಇಲಾಖೆಯ ಯೋಜನೆ ಮತ್ತು ಕಾರ್ಯಕ್ರಮಗಳು ಪುಸ್ತಕದಲ್ಲೇ ಉಳಿಯದೆ ಕಾರ್ಯರೂಪಕ್ಕೆ ತಂದು ಅದರ ಪ್ರಯೋಜನವನ್ನು ರೈತರಿಗೆ ತಲುಪಿಸಬೇಕೆಂದು ಅವರು ಸಚಿವರು ಅಧಿಕಾರಿಗಳಿಗೆ ತಿಳಿಸಿದರು. ಹನಿ ನೀರಾವರಿಗಾಗಿಯೇ 400 ಕೋಟಿ ಅನುದಾನವಿದೆ. ಇದರ ಪ್ರಯೋಜನ ರೈತರಿಗೆ ದೊರೆಯಬೇಕು, ಶೇ.100ರಷ್ಟು ಪ್ರಗತಿಯನ್ನು ಸಾಧಿಸಬೇಕು, ಯಾವುದೇ ಸಬೂಬು ಹೇಳದೆ ಧೈರ್ಯವಾಗಿ, ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದರು.
ಇಲಾಖೆ ಕೈಪಿಡಿಯನ್ನು ಹೊರತಂದಿದ್ದು, ಎಲ್ಲಾ ಮಾಹಿತಿಯನ್ನು ರೈತರಿಗೆ ತಿಳಿಸಬೇಕು. ರಾಜ್ಯದಲ್ಲಿ 20 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ತೋಟಗಾರಿಕಾ ಬೆಳೆಗಳಿದ್ದು, 5.37 ಲಕ್ಷ ಹೆಕ್ಟೇರ್‍ನಲ್ಲಿ ಸೂಕ್ಷ್ಮ ಮತ್ತು ಹನಿ ನೀರಾವರಿ ಅಳವಡಿಸಲಾಗಿದೆ. 1137 ಕೋಟಿ ರೂ. ಸಹಾಯಧನವನ್ನು 4 ಲಕ್ಷಕ್ಕೂ ಹೆಚ್ಚು ರೈತರಿಗೆ ನೀಡಲಾಗಿದೆ ಎಂದು ತಿಳಿಸಿದರು.

ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆ ರಾಷ್ಟ್ರದಲ್ಲೇ ಮೊದಲ ಸ್ಥಾನ ಪಡೆದುಕೊಂಡಿದೆ. ಇದು ಹೆಮ್ಮೆ ಪಡುವಂತಹ ವಿಚಾರ. ಹೊಸ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು ಎಂದರು. ತೋಟಗಾರಿಕೆಯಲ್ಲಿ ಹೈಡ್ರೋ ಫೋನಿಕ್ ಹೆಚ್ಚು ಉಪಯುಕ್ತವಾಗಿದ್ದು, ಅಧಿಕಾರಿಗಳು ಗಮನಹರಿಸಬೇಕು, ಟ್ಯಾಂಕರ್‍ಗಳಿಗೆ 50 ಸಾವಿರ ಸಹಾಯಧನವನ್ನು ನೀಡಲಾಗುತ್ತದೆ. ಆದರೂ ರೈತರು ಮುಂದೆ ಬರುತ್ತಿಲ್ಲ. ಕಾರಣ ಶೇ.28ರಷ್ಟು ಜಿಎಸ್‍ಟಿ ವಿಧಿಸಲಾಗಿದ್ದು, 40 ಸಾವಿರ ರೂ. ತೆರಿಗೆಯನ್ನೇ ಪಾವತಿಸಬೇಕಾಗುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆ ಆಯುಕ್ತ ಪ್ರಕಾಶ್ ಚಂದ್ರ ರೆ, ಜಂಟಿ ನಿರ್ದೇಶಕ (ಹನಿನೀರಾವರಿ) ಡಾ.ಕೃಷ್ಣ ಸೇರಿದಂತೆ ಹಲವಾರು ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

Facebook Comments

Sri Raghav

Admin