ಉಗ್ರರ ಸುರಕ್ಷಿತ ತಾಣಗಳನ್ನು ತೆರವುಗೊಳಿಸುವಂತೆ ಪಾಕ್‍ಗೆ ಟ್ರಂಪ್ ಮತ್ತೆ ತಾಕೀತು

ಈ ಸುದ್ದಿಯನ್ನು ಶೇರ್ ಮಾಡಿ

Trump--01

ವಾಷಿಂಗ್ಟನ್, ಅ.27-ತನ್ನ ನೆಲದಲ್ಲಿ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಪಾಕಿಸ್ತಾನ ನಿರ್ಣಾಯಕ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಉಗ್ರರ ಸುರಕ್ಷಿತ ಸ್ವರ್ಗದ ತಾಣಗಳನ್ನು ತೆರವುಗೊಳಿಸಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಸ್ಲಾಮಾಬಾದ್‍ಗೆ ಮತ್ತೊಮ್ಮೆ ಗಂಭೀರ ಎಚ್ಚರಿಕೆ ನೀಡಿದ್ದಾರೆ.  ಪಾಕಿಸ್ತಾನಕ್ಕೆ ನಮ್ಮ ನಿರೀಕ್ಷೆಗಳನ್ನು ಹಲವಾರು ಬಾರಿ ಸಂವಹನ ಮಾಡಿದ್ದೇವೆ. ಈಗಲೂ ಕೂಡ ಉಗ್ರಗಾಮಿ ಬಣಗಳು ಮತ್ತು ಉಗ್ರರ ವಿರುದ್ಧ ನಿರ್ಣಾಯಕ ಕ್ರಮಗಳನ್ನು ಅದು ಕೈಗೊಳ್ಳಲೇಬೇಕು ಎಂಬುದು ಅಮೆರಿಕದ ಆಗ್ರಹವಾಗಿದೆ.

ಈ ಬಗ್ಗೆ ಟ್ರಂಪ್ ಸ್ಪಷ್ಟ ನಿಲುವು ಹೊಂದಿದ್ದಾರೆ ಎಂದು ವಿದೇಶಾಂಗ ಇಲಾಖೆ ವಕ್ತಾರ ಹೀಥರ್ ನೌಅರ್ಟ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಪಾಕಿಸ್ತಾನಕ್ಕೆ ಇದೇ ರೀತಿಯ ತಾಕೀತು ಮಾಡಿ ಏಷ್ಯಾ ಪ್ರವಾಸವನ್ನು ವಿದೇಶಾಂಗ ಸಚಿವ ರೆಕ್ಸ್ ಟೆಲ್ಲರ್‍ಸನ್ ಅಂತ್ಯಗೊಳಿಸಿದ ನಂತರ ಅಮೆರಿಕದ ಈ ಪುನಾವರ್ತಿತ ಎಚ್ಚರಿಕೆ ಹೇಳಿಕೆ ಮಹತ್ವ ಪಡೆದುಕೊಂಡಿದೆ.

Facebook Comments

Sri Raghav

Admin