ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಭಾರಿ ಸ್ಫೋಟದಲ್ಲಿ 47 ಮಂದಿ ಜೀವಂತ ದಹನ

ಈ ಸುದ್ದಿಯನ್ನು ಶೇರ್ ಮಾಡಿ

Fire--02

ಜಕಾರ್ತ, ಅ.27-ಇಂಡೋನೆಷ್ಯಾ ರಾಜಧಾನಿ ಜಕಾರ್ತದ ಹೊರವಲಯದಲ್ಲಿನ ಪಟಾಕಿ ಕಾರ್ಖಾನೆಯೊಂದರಲ್ಲಿ ನಿನ್ನೆ ಸಂಭವಿಸಿದ ಬೆಂಕಿ ಮತ್ತು ಭಾರೀ ಸ್ಫೋಟ ದುರಂತದಲ್ಲಿ 47 ಮಂದಿ ಸುಟ್ಟು ಕರಕಲಾಗಿದ್ದು, ಅನೇಕರು ತೀವ್ರ ಗಾಯಗೊಂಡಿದ್ದಾರೆ. ಜಕಾರ್ತ ಉಪನಗರ ಟಿಂಗೆರಂಗ್‍ನಲ್ಲಿರುವ ಕೈಗಾರಿಕಾ ಪ್ರದೇಶದಲ್ಲಿ ಈ ಭೀಕರ ದುರ್ಘಟನೆ ಸಂಭವಿಸಿದೆ. 50ಕ್ಕೂ ಹೆಚ್ಚು ಮಂದಿ ಗಾಯಾಳುಗಳಲ್ಲಿ ಕೆಲವರ ಸ್ಥಿತಿ ವಿಷಮವಾಗಿರುವುದರಿಂದ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.

ಈ ಕಾರ್ಖಾನೆಯಲ್ಲಿ ಒಟ್ಟು 103 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಘಟಕದಲ್ಲಿ ಕಾಣಿಸಿಕೊಂಡ ಬೆಂಕಿಯಿಂದ ಎರಡು ಭಾರೀ ಸ್ಫೋಟಗಳು ಸಂಭವಿಸಿತು. ಆಸ್ಫೋಟದ ಶಬ್ದವು ಬಹು ದೂರದವರೆಗೂ ಕೇಳಿ ಬಂತು ಎಂದು ಸ್ಥಳೀಯರು ಹೇಳಿದ್ದಾರೆ. ಈ ದುರಂತದಲ್ಲಿ ಈವರೆಗೆ 47 ಮಂದಿ ಮೃತಪಟ್ಟಿದ್ದಾರೆ. ಅವರು ಗುರುತು ಸಿಗದಷ್ಟು ಸುಟ್ಟು ಕರಲಾಗಿದ್ದಾರೆ. 50ಕ್ಕೂ ಹೆಚ್ಚು ಗಾಯಾಳುಗಳು ಮೂರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಕಾರ್ತ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬೆಂಕಿ ಮತ್ತು ಸ್ಫೋಟಗಳಿಂದ ಕಾರ್ಖಾನೆಯ ಒಂದು ಭಾಗ ಕುಸಿದಿದೆ. ಬೆಳಗ್ಗೆ ಹೊತ್ತಿಕೊಂಡ ಬೆಂಕಿಯನ್ನು ಸಂಜೆ ವೇಳೆಗೆ ಅಗ್ನಿಶಾಮಕ ಸಿಬ್ಬಂದಿ ನಿಯಂತ್ರಿಸಿದರು. ಆರು ವಾರಗಳ ಹಿಂದಷ್ಟೇ ಈ ಪಟಾಕಿ ತಯಾರಿಕೆ ಘಟಕ ಆರಂಭವಾಗಿತ್ತು.

Facebook Comments

Sri Raghav

Admin