10 ವರ್ಷ ಮಕ್ಕಳಿಲ್ಲವೆಂದು ಕೊರಗುತ್ತಿದ್ದ ಮಹಿಳೆಗೆ ತ್ರಿವಳಿ ಮಕ್ಕಳ ಜನನ..!

ಈ ಸುದ್ದಿಯನ್ನು ಶೇರ್ ಮಾಡಿ

Babies--01

ಮೈಸೂರು,ಅ.27- ಹತ್ತು ವರ್ಷದಿಂದ ಮಕ್ಕಳಿಲ್ಲವೆಂದು ಕೊರಗುತ್ತಿದ್ದ ಗೃಹಿಣಿ ಇದೀಗ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ್ದು, ದಂಪತಿ ಮೊಗದಲ್ಲಿ ಸಂತಸ ಮೂಡಿದೆ. ನಂಜನಗೂಡು ತಾಲ್ಲೂಕಿನ ಮಾದಾಪುರ ಗ್ರಾಮದ ಮಂಜುನಾಥ್ ಮತ್ತು ರೂಪಾ ದಂಪತಿಯೇ ಮುದ್ದಾದ ತ್ರಿವಳಿಗಳ ಪೋಷಕರು.
ತ್ರಿವಳಿ ಪೈಕಿ ಒಂದು ಗಂಡು ಹಾಗೂ ಇ ಬ್ಬರು ಹೆಣ್ಣು ಶಿಶುಗಳಿಗೆ ರೂಪಾ ಜನ್ಮ ನೀಡಿದ್ದಾರೆ.  29 ವರ್ಷದ ರೂಪಾ ಅವರಿಗೆ ವಿವಾಹವಾಗಿ 10 ವರ್ಷವಾಗಿದ್ದರೂ ಮಕ್ಕಳಾಗಿರಲಿಲ್ಲ. ಇದೇ ಕೊರಗಿನಲ್ಲಿ ನೊಂದಿದ್ದ ದಂಪತಿಗೆ ಇದೀಗ ಮೂರು ಮಕ್ಕಳು ಜನಿಸಿರುವುದು ಸಂತಸವನ್ನುಂಟು ಮಾಡಿದೆ. ನಂಜನಗೂಡಿನ ಇತಿಹಾಸದಲ್ಲೇ ಇದು ಅಪರೂಪದ ಹಾಗೂ ಮೊದಲ ಘಟನೆಯಾಗಿದೆ ಎಂದು ಖಾಸಗಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

Facebook Comments

Sri Raghav

Admin