ಅಂಗನವಾಡಿ ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ

ಈ ಸುದ್ದಿಯನ್ನು ಶೇರ್ ಮಾಡಿ

anganavadi
ತುಮಕೂರು, ಅ.28-ತುಮಕೂರು ನಗರ ಶಿಶು ಅಭಿವೃದ್ಧಿ ಯೋಜನೆಯಡಿ ವಾರ್ಡ್ ನಂ-09ರ ಹೆಗ್ಗಡೆ ಕಾಲೋನಿ (ಸಾಮಾನ್ಯ) ಹಾಗೂ ವಾರ್ಡ್ ನಂ-8ರ ಹೌಸಿಂಗ್ ಬೋರ್ಡ್ (ಅಲ್ಪಸಂಖ್ಯಾತ ವರ್ಗ) ಅಂಗನವಾಡಿ ಕೇಂದ್ರಗಳಲ್ಲಿ ಸಹಾಯಕಿಯರ ಹುದ್ದೆಗಳು ಖಾಲಿಯಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ತಮ್ಮ ಅರ್ಜಿಗಳನ್ನು ನವೆಂಬರ್ 10ರ ಸಂಜೆ 5.30ರೊಳಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ತುಮಕೂರು ನಗರ ಇವರ ಕಚೇರಿಗೆ ತಲುಪಿಸುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.


ಅಂಗನವಾಡಿ ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಚಿಕ್ಕನಾಯಕನಹಳ್ಳಿ, ಅ.28-ತಾಲ್ಲೂಕಿನ ಶಿಶು ಅಭಿವೃದ್ದಿ ಯೋಜನಾ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಖಾಲಿ ಇರುವ ಅಂಗನವಾಡಿ ಸಹಾಯಕಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಿಡಿಪಿಒ ತಿಪ್ಪಯ್ಯ ತಿಳಿಸಿದ್ದಾರೆ.ಎಸ್.ಸಿ.ಮೀಸಲಾತಿ ಅಭ್ಯರ್ಥಿಗಳಿಗೆ : ದೊಡ್ಡಬಿದರೆ ಪಂಚಾಯಿತಿಯ ಬಳ್ಳೆಕಟ್ಟೆ ತಾಂಡ್ಯ, ತಿಮ್ಮನಹಳ್ಳಿ : ಬಡಕೇಗುಡ್ಲು ಬೋವಿಕಾಲೋನಿ, ಮುದ್ದೇನಹಳ್ಳಿ : ಸಾಲ್ಕಟ್ಟೆಕಾಲೋನಿ ಅಂಗನವಾಡಿ ಕೇಂದ್ರಗಳಲ್ಲಿ ಅಂಗನವಾಡಿ ಸಹಾಯಕಿ ಹುದ್ದೆಗೆ ಅರ್ಜಿ.

ಎಸ್.ಟಿ. ಮೀಸಲಾತಿ ಅಭ್ಯರ್ಥಿಗೆ : ತೀರ್ಥಪುರ : ಕಾತ್ರಿಕೆಹಾಳ್.ಎ ಅಂಗನವಾಡಿ ಕೇಂದ್ರಕ್ಕೆ ಅಂಗನವಾಡಿ ಸಹಾಯಕಿ ಹುದ್ದೆಗೆ ಅರ್ಜಿ ಆಹ್ವಾನ. ಇತರೆ ಅಭ್ಯರ್ಥಿಗಳು :ಹಂದನಕೆರೆ ಪಂಚಾಯಿತಿ : ಹಂದನಕೆರೆ. ಎ, ಬರಗೂರು ಪಂಚಾಯಿತಿ : ಪಾಪನಕೋಣ, ಚೌಳಕಟ್ಟೆ : ಲಕ್ಷ್ಮೀಪುರ, ಕಂದಿಕೆರೆ : ಬೈರಲಿಂಗನಪಾಳ್ಯ, ತೀರ್ಥಪುರ : ಬರಶಿಡ್ಲಹಳ್ಳಿ.ಎ, ಬರಗೂರು ಪಂಚಾಯಿತಿ : ಬರಗೂರು, ಪುರಸಭೆ : ಕೇದಿಗೆಹಳ್ಳಿ ಅಂಗನವಾಡಿ ಕೇಂದ್ರಗಳಿಗೆ ಇತರೆ ಮೀಸಲಾತಿ ಹೊಂದಿರುವ ಅಭ್ಯರ್ಥಿಗಳಿಗೆ ಅಂಗನವಾಡಿ ಸಹಾಯಕಿ ಹುದ್ದೆಗೆ ಅರ್ಜಿಆಹ್ವಾನಿಸಲಾಗಿದೆ.

ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲಾತಿಗಳೊಂದಿಗೆ ನ.13ರ ಸಂಜೆ 5.30ರೊಳಗೆ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿಗೆ ತಲುಪುವಂತೆ ಸಲ್ಲಿಸುವುದು. ಹೆಚ್ಚಿನ ವಿವರಗಳಿಗಾಗಿ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Facebook Comments

Sri Raghav

Admin