ಉತ್ತರ ಕೊರಿಯಾ ಅಣ್ವಸ್ತ್ರ ಬಳಸಿದರೆ ಭಾರೀ ಮಿಲಿಟರಿ ಅಟ್ಯಾಕ್ : ದೊಡ್ಡಣ್ಣ ಎಚ್ಚರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Kim-Trump--01

ಸಿಯೋಲ್. ಅ.28-ಉತ್ತರ ಕೊರಿಯಾ ಮಾರಕ ಅಣ್ವಸ್ತ್ರಗಳನ್ನು ಬಳಸಿದ್ದೇ ಆದಲ್ಲಿ ಭಾರೀ ಪ್ರಮಾಣದ ಸೇನಾ ಪ್ರತಿ ದಾಳಿಯನ್ನು ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಮತ್ತೊಮ್ಮೆ ಗಂಭೀರ ಎಚ್ಚರಿಕೆ ನೀಡಿದೆ. ದಕ್ಷಿಣ ಕೊರಿಯಾ ಪ್ರವಾಸದಲ್ಲಿರುವ ಅಮೆರಿಕ ರಕ್ಷಣಾ ಸಚಿವ ಜಿಮ್ ಮ್ಯಾಟಿಸ್ ಸಿಯೋಲ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯಾವುದೇ ಪ್ರಮಾದ ಎಸಗದಂತೆ ಪಯೊಂಗ್‍ಯಾಂಗ್‍ಗೆ ತಾಕೀತು ಮಾಡಿದರು.

ಅಮೆರಿಕ ಮೇಲಾಗಲಿ ಅಥವಾ ನಮ್ಮ ಮಿತ್ರ ರಾಷ್ಟ್ರಗಳ ಮೇಲಾಗಲಿ ಯಾವುದೇ ದಾಳಿ ನಡೆದರೆ ಅದನ್ನು ಮಣಿಸುತ್ತೇವೆ ಎಂದು ಮ್ಯಾಟಿಸ್ ಹೇಳಿದರು. ಉತ್ತರ ಕೊರಿಯಾ ಯಾವುದೇ ಅಣ್ವಸ್ತ್ರಗಳನ್ನು ಬಳಸಿದರೆ, ವ್ಯಾಪಕ, ಅತ್ಯಂತ ಪರಿಣಾಮಾತ್ಮಕ ಮತ್ತು ಭಾರೀ ಪ್ರಮಾಣದ ಸೇನಾ ಪ್ರತಿಕ್ರಿಯೆಯನ್ನು ಎದುರಿಸಬೇಕಾಗುತ್ತದೆ ಎಂದು ರಕ್ಷಣಾ ಸಚಿವರು ಎಚ್ಚರಿಕೆ ನೀಡಿದರು.

Facebook Comments

Sri Raghav

Admin