ಭತ್ತ ಕಟಾವು ಯಂತ್ರ ಡಿಕ್ಕಿ: ವೃದ್ಧ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

accident-dead
ಕೊಳ್ಳೆಗಾಲ,ಅ.28-ಭತ್ತದ ಬೆಳೆ ಕಟಾವು ಮಾಡುವ ಯಂತ್ರ ಡಿಕ್ಕಿ ಹೊಡೆದು ವೃದ್ದರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಟಗರುಪುರ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಬೆಳಗ್ಗೆ ನಡೆದಿದೆ. ರುದ್ರಗೌಡ(70) ಮೃತಪಟ್ಟ ವೃದ್ದ ತಮಿಳುನಾಡಿನಿಂದ ಭತ್ತದ ಬೆಳೆ ಕಟಾವು ಮಾಡಲು ಶಿವಮೊಗ್ಗಕ್ಕೆ ತೆರಳುತ್ತಿದ್ದ ಯಂತ್ರ ರಸ್ತೆ ದಾಟುತ್ತಿದ್ದ ರುದ್ರೇಗೌಡರಿಗೆ ಡಿಕ್ಕಿ ಹೊಡೆದ ರಭಸಕ್ಕೆ ವೃದ್ದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ರಾತ್ರಿಯಿಡಿ ವಾಹನ ಚಾಲನೆ ಮಾಡಿಕೊಂಡು ಬಂದಿದ್ದರಿಂದ ಚಾಲಕ ನಿದ್ದೆ ಮಂಪರಿನಲ್ಲಿದ್ದ. ಅಲ್ಲದೆ ಬೆಳಗಿನ ಜಾವವಾಗಿದ್ದರಿಂದ ಮಂಜು ಕವಿದಿದ್ದು, ಮಬ್ಬಿನಲ್ಲಿ ವೃದ್ದ ಕಾಣದೆ ಡಿಕ್ಕಿ ಹೊಡೆದಿದ್ದಾರೆ. ಈ ಸಂಬಂಧ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin