ರವಿಶಂಕರ್ ಗುರೂಜಿಗೆ ಸೇರಿದ ಕಟ್ಟಡ ಕೆಡವಲು ಎನ್‍ಜಿಟಿ ಆದೇಶ

ಈ ಸುದ್ದಿಯನ್ನು ಶೇರ್ ಮಾಡಿ

NGT--02

ಕೋಲ್ಕತಾ, ಅ.28- ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯಿಂದ (ನ್ಯಾಷನಲ್ ಗ್ರೀನ್ ಟ್ರಿಬ್ಯುನಲ್-ಎನ್‍ಜಿಟಿ) ಅಗಾಗ ತರಾಟೆಗೆ ಒಳಗಾಗುತ್ತಿರುವ ಬೆಂಗಳೂರಿನ ಆರ್ಟ್ ಆಫ್ ಲೀವಿಂಗ್ (ಎಒಎಲ್) ಸಂಸ್ಥಾಪಕರಾದ ರವಿಶಂಕರ್ ಗುರೂಜಿ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಪಾರಿಸರಿಕ ಪ್ರಾಮುಖ್ಯತೆ ಹೊಂದಿದ ಪೂರ್ವ ಕೋಲ್ಕತಾದ ಆರ್ದಭೂಮಿ ಪ್ರದೇಶದಲ್ಲಿರುವ ರವಿಶಂಕರ್ ಗುರೂಜಿ ಸಂಸ್ಥೆಗೆ ಸೇರಿದ ಮೂರು ಅಂತಸ್ತುಗಳ ಕಟ್ಟಡವನ್ನು ಕೆಡವಲು ಎನ್‍ಜಿಟಿ ಆದೇಶ ನೀಡಿದೆ.

ಎನ್‍ಜಿಟಿ ಪೂರ್ವ ವಲಯ ಪೀಠವು ಈ ಸಂಬಂಧ ಅ.25ರಂದು ಆದೇಶ ನೀಡಿದ್ದು, ವೈದಿಕ ಧರ್ಮ ಸಂಸ್ಥಾನಕ್ಕೆ (ವಿಡಿಎಸ್) ಸೇರಿದ ಮೂರು ಮಹಡಿಗಳ ಕಟ್ಟಡವನ್ನು ಮೂರು ತಿಂಗಳಲ್ಲಿ ನೆಲಸಮಗೊಳಿಸುವಂತೆ ಇಕೆಡಬ್ಲ್ಯು ನಿರ್ವಹಣಾ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದೆ ಹಾಗೂ ನಿಯಮಗಳ ಉಲ್ಲಂಘನೆಗಾಗಿ ದೊಡ್ಡ ಮೊತ್ತದ ದಂಡ ವಿಧಿಸಲು ಪರಿಗಣಿಸಿದೆ.

ಪಶ್ಚಿಮಬಂಗಾಳ ಸರ್ಕಾರದ ಪರಿಸರ ಇಲಾಖೆ ಅಡಿಯಲ್ಲಿರುವ ನಿರ್ವಹಣಾ ಪ್ರಾಧಿಕಾರ ರವಾನಿಸಿ ನೋಟಿಸ್‍ಗಳನ್ನು ವಿಡಿಎಸ್ ನಿರ್ಲಕ್ಷಿಸಿತ್ತು ಮತ್ತು ನೀತಿ-ನಿಯಮಗಳನ್ನು ಗಾಳಿಗೆ ತೂರಿ 2015ರ ಜುಲೈ-ಅಗಸ್ಟ್‍ನಲ್ಲಿ ಕಟ್ಟಡ ನಿರ್ಮಿಸಿತ್ತು. ಅಧಿಕಾರ ಹೊಂದಿದ್ದರೂ ಕೂಡ ನಿರ್ವಹಣಾ ಪ್ರಾಧಿಕಾರವು ಈ ಅನಧಿಕೃತ ಕಟ್ಟಡದ ವಿರುದ್ಧ ಕ್ರಮ ಕೈಗೊಂಡಿರಲಿಲ್ಲ. ಈ ಸಂಬಂಧ ಸರ್ಕಾರೇತರ ಸಂಸ್ಥೆಯೊಂದು ಹಸಿರು ನ್ಯಾಯಮಂಡಳಿಯಲ್ಲಿ ದೂರು ದಾಖಲಿಸಿತ್ತು.

Facebook Comments

Sri Raghav

Admin