ಖರ್ಗೆ ತವರು ಕ್ಷೇತ್ರದಲ್ಲೇ ಪಕ್ಷ ತ್ಯಜಿಸಲು ಮುಂದಾದ ಮುಖಂಡರು, ಕಾಂಗ್ರೆಸ್ ನಲ್ಲಿ ತಳಮಳ

ಈ ಸುದ್ದಿಯನ್ನು ಶೇರ್ ಮಾಡಿ

mallikarjun-kharge

ಕಲಬುರಗಿ, ಅ.29- ಕಾಂಗ್ರೆಸ್‍ನ ಘಟಾನುಘಟಿ ನಾಯಕರು ಎನಿಸಿಕೊಂಡ ಮಲ್ಲಿಕಾರ್ಜುನಖರ್ಗೆ ಅವರ ತವರು ಕ್ಷೇತ್ರ ಕಲಬುರಗಿಯಲ್ಲೇ ಹಲವು ಕಾಂಗ್ರೆಸ್ ಮುಖಂಡರು ಪಕ್ಷ ತ್ಯಜಿಸಲು ಮುಂದಾಗಿದ್ದಾರೆ ಎಂಬ ವಿಷಯ ಕೈ ವಲಯದಲ್ಲಿ ತಳಮಳ ಉಂಟು ಮಾಡಿದೆ. ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿನಿಧಿಸುವ ಚಿತ್ತಾಪುರ ಕ್ಷೇತ್ರದಲ್ಲಿ ಹತ್ತಾರು ಹಿರಿಯ ಕಾಂಗ್ರೆಸ್ ನಾಯಕರು ಪಕ್ಷ ತೊರೆದು ಬಿಜೆಪಿ ಸೇರಲು ತಯಾರಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಮಲ್ಲಿಕಾರ್ಜುನ ಖರ್ಗೆ ಅವರ ಭದ್ರತೆ ಕೋಟೆಯಾಗಿರುವ ಕಲಬುರಗಿ ಲೋಕಸಭೆ ಮತ್ತು ಚಿತ್ತಾಪುರ ವಿಧಾನಸಭೆ ಕ್ಷೇತ್ರಗಳಲ್ಲಿ ಈ ಬೆಳೆವಣಿಗೆಗಳು ನಡೆದಿರುವುದು ಕಾಂಗ್ರೆಸ್ ವಲಯದಲ್ಲಿ ಚುನಾವಣೆಯ ಈ ಸಂದರ್ಭದಲ್ಲಿ ತೀವ್ರ ಆತಂಕ ಉಂಟು ಮಾಡಿದೆ. ಮಾಜಿ ಶಾಸಕ ವಿಶ್ವನಾಥ್‍ಪಾಟೀಲ ಹೆಬ್ಬಾಳ ಅವರು ಕಾಂಗ್ರೆಸ್ ಹಿರಿಯ ನಾಯಕರ ನಡವಳಿಕೆಗಳ ಬಗ್ಗೆ ತೀವ್ರ ಬೆಸತ್ತಿದ್ದು, ತಮ್ಮ ಬೆಂಬಲಿಗರೊಂದಿಗೆ ಬಿಜೆಪಿ ಸೇರಲು ಮುಂದಾಗಿದ್ದಾರೆ. ಅಲ್ಲದೆ, ಇನ್ನೂ ಹಲವರನ್ನು ಬಿಜೆಪಿಯತ್ತ ಸೆಳೆಯುವ ಪ್ರಯತ್ನ ಮಾಡಿದ್ದಾರೆ.

Facebook Comments

Sri Raghav

Admin