ಹಿಂಬದಿ ಸವಾರರಿಗೆ ನಿಷೇಧದ ಎಫೆಕ್ಟ್ : 100 ಸಿಸಿ ಒಳಗಿನಿ ದ್ವಿಚಕ್ರ ವಾಹನದ ಮಾರಾಟ ದಿಢೀರ್ ಕುಸಿತ

ಈ ಸುದ್ದಿಯನ್ನು ಶೇರ್ ಮಾಡಿ

Bike-c0-1

ಬೆಂಗಳೂರು, ಅ.29-ನೂರು ಸಿಸಿಗಿಂತ ಕಡಿಮೆ ಎಂಜಿನ್ ಸಾಮರ್ಥ್ಯವಿರುವ ದ್ವಿಚಕ್ರ ವಾಹನಗಳಲ್ಲಿ ಹಿಂಬದಿ ಸವಾರರಿಗೆ ನಿಷೇಧ ಹೇರಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ ನಂತರ ಬೆಂಗಳೂರು ನಗರದಲ್ಲಿ 100 ಸಿಸಿಗಿಂತ ಕಡಿಮೆ ಎಂಜಿನ್ ಸಾಮರ್ಥ್ಯವಿರುವ ದ್ವಿಚಕ್ರ ವಾಹನದ ಮಾರಾಟ ದಿಢೀರ್ ಕಡಿಮೆಯಾಗಿದೆ. 100 ಸಿಸಿಗಿಂತ ಕಡಿಮೆ ಎಂಜಿನಿ ಸಾಮಥ್ರ್ಯವಿರುವ ಬೈಕ್ ಗಳನ್ನು ಖರೀದಿಸಿದರೆ ಅದರ ರಿಜಿಸ್ಟ್ರೇಷನ್ ಗೆ ಅನುಮತಿ ಸಿಗಲಿಕ್ಕಿಲ್ಲ ಅಥವಾ ಖರೀದಿಸಿದ ನಂತರ ಅದನ್ನು ರೂಪಾಂತರ ಮಾಡಲು ಖರ್ಚು ವೆಚ್ಚ ಹೆಚ್ಚಾಗಬಹುದು ಎಂಬುದು ಗ್ರಾಹಕರ ಯೋಚನೆಯಾಗಿದೆ.

ಆಟೋಮೊಬೈಲ್ ಕೈಗಾರಿಕೆ ವಿಶ್ಲೇಷಕರ ಪ್ರಕಾರ, 100 ಸಿಸಿಗಿಂತ ಕಡಿಮೆ ಎಂಜಿನ್ ಸಾಮಥ್ರ್ಯವಿರುವ ದ್ವಿಚಕ್ರ ವಾಹನಗಳ ಮಾರಾಟ ಬೆಂಗಳೂರಿನಲ್ಲಿ ಶೇಕಡಾ 5.3ರಷ್ಟು ಕಡಿಮೆಯಾಗಿದೆ. ರಾಜ್ಯ ಸರ್ಕಾರ ನಿಷೇಧ ಹೇರಿ ನಾಲ್ಕು ವರ್ಷವಾದ ನಂತರವೂ ಈಗಾಗಲೇ ಸಂಗ್ರಹವಿರುವ 100 ಸಿಸಿ ಗಿಂತ ಕಡಿಮೆ ಸಾಮಥ್ರ್ಯವಿರುವ ವಾಹನಗಳನ್ನು ಏನು ಮಾಡಬೇಕೆಂದು ಗೊಂದಲದಲ್ಲಿದ್ದಾರೆ. ಹೈಕೋರ್ಟ್ ಆದೇಶದ ಪ್ರಕಾರ, ಸಾರಿಗೆ ಇಲಾಖೆ ಕಳೆದ ಸೋಮವಾರ ಈ ಆದೇಶ ಹೊರಡಿಸಿತ್ತು.

ಟಿವಿಎಸ್ ಸ್ಕೂಟಿ ಪೆಪ್ ಪ್ಲಸ್, ಟಿವಿಎಸ್ ಸ್ಟೋರ್ಟ್, ಹೀರೊ ಹೆಚ್ ಎಫ್ ಡಿಲಕ್ಸ್, ಹೀರೊ ಸ್ಲೆಂಡರ್ ಪ್ಲಸ್, ಟಿವಿಎಸ್ ಎಕ್ಸ್ ಎಲ್ 100, ಹೀರೊ ಸ್ಲೆಂಡರ್ ಪ್ರೊ, ಬಜಾಜ್ ಸಿಟಿ 100, ಹೀರೊ ಹೆಚ್ ಎಫ್ ಡಿಲಕ್ಸ್ ಎಕೊ ಮತ್ತು ಹೀರೊ ಪಾಶನ್ ಐ3ಎಸ್ ಗಳಲ್ಲಿ ಹಿಂಬದಿ ಸವಾರಿಗೆ ನಿಷೇಧ ಹೇರಲಾಗಿದೆ.ಸರ್ಕಾರ ಈ ನಿಯಮ ಜಾರಿಗೆ ತಂದಿರುವ ಹಿನ್ನೆಲೆಯಲ್ಲಿ ಮಾರಾಟಗಾರರಿಗೆ ಮತ್ತು ಗ್ರಾಹಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಕರ್ನಾಟಕ ಮೋಟಾರ್ ವಾಹನ ನಿಯಮ 1989ಕ್ಕೆ ತಿದ್ದುಪಡಿ ತರಲು ಅಧಿಕಾರಿಗಳು ಚಿಂತನೆ ನಡೆಸುತ್ತಿದ್ದಾರೆ.

100 ಸಿಸಿ.ಗೆ ಕಡಿಮೆ ಎಂಜಿನ್ ಸಾಮಥ್ರ್ಯದ ದ್ವಿಚಕ್ರ ವಾಹನಗಳಲ್ಲಿ ಹಿಂಬದಿ ಸವಾರರು ಪ್ರಯಾಣಿಸುವುದನ್ನು ನಿಷೇಧಿಸಲು ರಾಜ್ಯ ಸರ್ಕಾರ ನಿರ್ಧರಿಸಿತ್ತು. 100 ಸಿಸಿ ಗಿಂತಲೂ ಕಡಿಮೆ ಸಾಮಥ್ರ್ಯವಿರುವ ದ್ವಿಚಕ್ರ ವಾಹನಗಳಲ್ಲಿ ಹಿಂಬದಿ ಸೀಟುಗಳನ್ನು ಸೇರಿಸಬಾರದೆಂದು ರಾಜ್ಯ ಸರ್ಕಾರ ದ್ವಿಚಕ್ರ ವಾಹನ ತಯಾರಕರಲ್ಲಿ ಮನವಿ ಮಾಡಿತ್ತು.ಕರ್ನಾಟಕ ಹೈಕೋರ್ಟ್ ಇತ್ತೀಚಿನ ಆದೇಶದ ಅನುಸಾರ , 100 ಸಿಸಿ.ಗೆ ಕಡಿಮೆ ಎಂಜಿನ್ ಸಾಮಥ್ರ್ಯದ ದ್ವಿಚಕ್ರ ವಾಹನಗಳಲ್ಲಿ, ಹಿಂಬದಿ ಸವಾರರ ಸೀಟು ಹೊಂದಿರುವ ದಿಚಕ್ರ ವಾಹನಗಳ ನೋಂದಣಿ ಮಾಡದಂತೆ ಎಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸಾರಿಗೆ ಇಲಾಖೆ ನಿರ್ದೇಶನ ನೀಡಿತ್ತು ಕರ್ನಾಟಕ ಮೋಟಾರು ವಾಹನ ಕಾಯ್ದೆ-1989 ಪ್ರಕಾರ 100 ಸಿಸಿ ಗಿಂತ ಕಡಿಮೆ ಸಾಮಥ್ರ್ಯದ ಎಂಜಿನ್ ಹೊಂದಿರುವ ದ್ವಿಚಕ್ರ ವಾಹನಗಳಲ್ಲಿ ಹಿಂಬದಿಯ ಸವಾರರು ಪ್ರಯಾಣ ಮಾಡುವಂತಿಲ್ಲ. ಆದರೆ, ದಿಚಕ್ರ ವಾಹನ ತಯಾರಿಕಾ ಸಂಸ್ಥೆಗಳು ಈ ಕಾನೂನು ಪಾಲಿಸುತ್ತಿರಲಿಲ್ಲ.
ಇತ್ತೀಚೆಗೆ ಅಪಘಾತದಲ್ಲಿ ಯುವಕನೊಬ್ಬ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್ ಕರ್ನಾಟಕ ಮೋಟಾರು ವಾಹನ ಕಾಯ್ದೆ-1989 ಅನ್ನು ಕಟ್ಟು ನಿತ್ತಾಗಿ ಜಾರಿಗೆ ತರುವಂತೆ ಆದೇಶಿಸಿತ್ತು. ಇದೀಗ ರಾಜ್ಯ ಸರ್ಕಾರ ಕಾಯ್ದೆ ಜಾರಿಗೆ ಮುಂದಾಗಿದ್ದು ಈ ಕುರಿತಂತೆ ಇದೇ 16 ರಂದು ಸಾರಿಗೆ ಇಲಾಖೆ ನೋಟೀಸ್ ಹೊರಡಿಸಿತ್ತು.

Facebook Comments

Sri Raghav

Admin