ಉಗ್ರ ಭೀತಿಯಿಂದ ಮಾರ್ಗ ಬದಲಿಸಿದ ಜೆಟ್ ಏರ್‍ವೇಸ್ ವಿಮಾನ

ಈ ಸುದ್ದಿಯನ್ನು ಶೇರ್ ಮಾಡಿ

Jet-Airways--02

ನವದೆಹಲಿ, ಅ.30- ಅಹ್ಮದಾಬಾದ್‍ನಿಂದ ಮುಂಬೈಗೆ ತೆರಳಬೇಕಾಗಿದ್ದ ದೆಹಲಿ ವಿಭಾಗಕ್ಕೆ ಸೇರಿದ ಜೆಟ್ ಏರ್ ವೇಸ್ ವಿಮಾನವೊಂದನ್ನು ಭದ್ರತೆಯ ಕಾರಣಗಳಿಗಾಗಿ ಮಾರ್ಗ ಬದಲಾವಣೆ ಮಾಡಿದ ಘಟನೆ ಇಂದು ಅಹ್ಮದಾಬಾದ್‍ನಲ್ಲಿ ನಡೆದಿದೆ. ಇಂದು ಬೆಳಗಿನಜವ 2-55ಕ್ಕೆ ದೆಹಲಿಯಿಂದ ಹೊರಟ ಜೆಟ್ ಏರ್‍ವೇಸ್‍ನ 9-ಡಬ್ಲ್ಯು-339 ವಿಮಾನವು 3-55ಕ್ಕೆ ಅಹ್ಮದಾಬಾದ್ ವಿಮಾನ ನಿಲ್ದಾಣದಲ್ಲಿ ಇಳಿಯಿತು. ನಂತರ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರನ್ನೂ ಕೆಳಗಿಳಿಸಿ ತಪಾಸಣೆ ಮಾಡಲಾಯಿತು ಎಂದು ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ತಿಳಿಸಿದ್ದಾರೆ.

ವಿಮಾನದಲ್ಲಿ ವಿಮಾನ ಅಪಹರಣಕಾರರಿದ್ದಾರೆ ಮತ್ತು ಸ್ಫೋಟಕಗಳಿವೆ ಎಂಬ ಸಂದೇಶವಿರುವ ಪತ್ರವೊಂದು ತನಗೆ ಬಾತ್‍ರೂಮ್‍ನಲ್ಲಿ ಸಿಕ್ಕಿದ್ದಾಗಿ ವಿಮಾನದಲ್ಲಿದ್ದ ಗಗನಸಖಿಯೊಬ್ಬರು ಅಧಿಕಾರಿಗಳಿಗೆ ತಿಳಿಸಿದ್ದರ ಹಿನ್ನೆಲೆಯಲ್ಲಿ ವಿಮಾನವನ್ನು ಅಹ್ಮದಾಬಾದ್‍ನಲ್ಲಿ ತುರ್ತಾಗಿ ಕೆಳಗಿಳಿಸಲಾಯಿತು. ನಂತರ ಅದನ್ನು ನಿಲ್ದಾಣದ ಮೂಲೆಯೊಂದಕ್ಕೆ ಕೊಂಡೊಯ್ದು ಅಲ್ಲಿ ತಪಾಸಣೆಗೊಳಪಡಿಸಲಾಯಿತು.  ವಿಮಾನದಲ್ಲಿ ಎಲ್ಲಿಯೂ ಯಾವುದೇ ಅನುಮಾನಾಸ್ಪದ ವಸ್ತುವಾಗಲಿ, ವ್ಯಕ್ತಿಗಳಾಗಲಿ ಪತ್ತೆಯಾಗಲಿಲ್ಲ. ಆದಾಗ್ಯೂ ಭದ್ರತಾ ದೃಷ್ಟಿಯಿಂದ ವಿಮಾನದ ಮಾರ್ಗ ಬದಲಾಯಿಸಲಾಗಿದೆ ಎಂದು ವಾಯು ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.

Facebook Comments

Sri Raghav

Admin