ಎಂಜಿನಿಯರ್ ಅಪಹರಿಸಿ ಹಲ್ಲೆಮಾಡಿ ಹಣ-ಆಭರಣ ದೋಚಿದ ದುಷ್ಕರ್ಮಿಗಳು

ಈ ಸುದ್ದಿಯನ್ನು ಶೇರ್ ಮಾಡಿ

robbers-1

ತುಮಕೂರು, ಅ.30-ಎಂಜಿನಿಯರೊಬ್ಬರನ್ನು ಅಪಹರಿಸಿ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ದುಷ್ಕರ್ಮಿಗಳು ಮೊಬೈಲ್ ಹಾಗೂ 15 ಸಾವಿರ ಹಣ, ಉಂಗುರ, ವಾಚನ್ನು ಕಿತ್ತುಕೊಂಡು ಬೆದರಿಕೆ ಹಾಕಿ ಪರಾರಿಯಾಗಿರುವ ಘಟನೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬೆಂಗಳೂರಿನ ವಸಂತನಗರದಲ್ಲಿರುವ ಖಾಸಗಿ ಕಂಪೆನಿಯೊಂದರ ನೀಲ್ಸ್ ಎಕ್ಸಿಕ್ಯೂಟಿವ್ ಎಂಜಿನಿಯರ್ ಆಗಿ ರಂಜನ್ ಎಂಬುವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತುಮಕೂರಿನ ಹೊರಭಾಗದ ಶಿರಾಗೇಟ್ ನಿವಾಸಿಯಾದ ರಂಜನ್ ಪ್ರತಿದಿನ ಇಲ್ಲಿಂದಲೇ ಹೋಗಿಬರುತ್ತಿದ್ದರು. ನಿನ್ನೆ ಕೆಲಸಕ್ಕೆಂದು ಶಿರಾ ಗೇಟ್ ಬಳಿ ಬರುತ್ತಿದ್ದಾಗ ಆಟೋಗಳಲ್ಲಿ ಬಂದ 8ಕ್ಕೂ ಹೆಚ್ಚು ಮಂದಿ ದುಷ್ಕರ್ಮಿಗಳು ಅಡ್ಡಗಟ್ಟಿ ಆಟೋದಲ್ಲಿ ಅಪಹರಿಸಿದ್ದಾರೆ.

ಅಂತರಸನಹಳ್ಳಿಯ ಬೈಪಾಸ್ ಬಳಿಯ ಸಿಟಿವೆಲ್ ಕಾರ್ಖಾನೆ ಬಳಿ ಕರೆದೊಯ್ದು ಎಲ್ಲರೂ ಸೇರಿ ಸ್ಟಿಕ್‍ನಿಂದ ಮನ ಬಂದಂತೆ ಹೊಡೆದು ರಂಜನ್ ಬಳಿ ಇದ್ದ ಎಲ್ಲ ವಸ್ತುಗಳನ್ನು ದೋಚಿದ್ದಲ್ಲದೆ, ಮೂರ್ನಾಲ್ಕು ದಿನದೊಳಗೆ 30 ಸಾವಿರ ಹಣ ಇದೇ ಜಾಗಕ್ಕೆ ತಂದುಕೊಡಬೇಕೆಂದು ಧಮ್ಕಿಹಾಕಿದ್ದಾರೆ. ಈ ವಿಷಯ ಯಾರಿಗಾದರೂ ತಿಳಿಸಿದರೆ ನಿನ್ನನ್ನೂ ಮತ್ತು ನಿನ್ನ ಕುಟುಂಬದವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕುವುದಾಗಿ ಹೇಳಿ ಅಲ್ಲಿಂದ ಪರಾರಿಯಾಗಿದ್ದಾರೆ. ನಂತರ ಈ ವಿಚಾರ ರಂಜನ್ ಅವರ ಸ್ನೇಹಿತನಿಗೆ ಹೇಗೋ ತಿಳಿದು ಪೋಷಕರಿಗೆ ತಿಳಿಸಿದ್ದಾನೆ. ಶಿರಾ ಗೇಟ್ ಹಾಗೂ ತುಮಕೂರು ನಗರದ ನಿವಾಸಿ ಸುನೀತ್ (ಸೂಳ್ಳ), ಶಿವು (ತಗಡು), ಮಂಜು, ವಿನಯ್ ಎಂಬುವರುಐದುಮಂದಿ ಸೇರಿಕೃತ್ಯ ನಡೆಸಿರುವುದುಗೊತ್ತಾಗಿದೆ. ಈ ಸಂಬಂಧ ಪೋಷಕರಿಗೆ ನಗರ ಠಾಣೆಗೆ ತಿಳಿಸಿದ್ದಾರೆ. ದೂರು ದಾಖಲಿಸಿಕೊಂಡ ಸಬ್‍ಇನ್ಸ್‍ಪೆಕ್ಟರ್ ವಿಜಯ್‍ಕುಮಾರ್, ಸಿಬ್ಬಂದಿಗಳ ಜತೆ ಕಾರ್ಯಾಚರಣೆ ನಡೆಸಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

Facebook Comments