ಈತನ ಹೊಟ್ಟೆಯಲ್ಲಿದ್ದವು 1 ಕೆಜಿ ತೂಕದ 639 ಮೊಳೆಗಳು…!

ಈ ಸುದ್ದಿಯನ್ನು ಶೇರ್ ಮಾಡಿ

Nail--01

ಕೋಲ್ಕತ್ತಾ, ಅ. 31-ಇಲ್ಲಿನ ವೈದ್ಯಕೀಯ ಕಾಲೇಜ್ ಮತ್ತು ಆಸ್ಪತ್ರೆಯ ವೈದ್ಯರು ಶಿಸೋಫ್ರೇನಿಯಾ(ಮನೋವಾಧಿ) ಬಾಧೆಯಿಂದ ನರಳುತ್ತಿದ್ದ ವ್ಯಕ್ತಿಯೊಬ್ಬನ ಹೊಟ್ಟೆಯಿಂದ ಸುಮಾರು ಒಂದು ಕಿಲೊ ತೂಕದ 639 ಕಬ್ಬಿಣದ ಮೊಳೆಗಳನ್ನು ತೆಗೆದಿದ್ದಾರೆ. ಉತ್ತರ ಪರಗಣ ಜಿಲ್ಲೆಯ ಗೊಬರ್ದಂಗದ ಈ ವ್ಯಕ್ತಿ ಕಳೆದ ಹಲವು ವರ್ಷಗಳಿಂದಲೂ ಕಬ್ಬಿಣದ ಮೊಳೆಗಳನ್ನು ತಿಂದಿದ್ದು, ಮಾನಸಿಕ ವ್ಯಾಧಿಯಿಂದ ಬಳಲುತ್ತಿದ್ದಾನೆ ಎಂದು ಡಾ. ಸಿದ್ಧಾರ್ಥ ಬಿಸ್ವಾಸ್ ತಿಳಿಸಿದ್ದಾರೆ.

ರೋಗಿಯ ಕಿಬ್ಬೊಟ್ಟಯಲ್ಲಿ ಸುಮರು 10 ಸೆಂಟಿಮೀಟರ್‍ನಷ್ಟು ಉದ್ದಕ್ಕೆ ಆಪರೇಷನ್ ಮಾಡಿ, ಮ್ಯಾಗ್ನೆಟ್ ಬಳಸಿ ಮೊಳೆಗಳು ಹಾಗೂ ಮಣ್ಣನ್ನೂ ಹೊರತೆಗೆಯಲಾಯಿತು. ಸುಮಾರು ಒಂದೂಮುಕ್ಕಾಲು ಗಂಟೆ ಕಾಲ ಆಪರೇಷನ್ ನಡೆಯಿತು ಎಂದು ಅವರು ಹೇಳಿದ್ದಾರೆ. ಈ ವ್ಯಕ್ತಿ ಕಳೆದ ಒಂದು ವಾರದಿಂದ ಹೊಟ್ಟೆನೋವಿನಿಂದ ನರಳುತ್ತಿದ್ದಾಗ ಅವನ್ನು ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಎಕ್ಸ್-ರೆ ತೆಗೆಸಿದಾಗ ಹೊಟ್ಟೆಯಲ್ಲಿ ಮೊಳೆ ಇರುವುದು ಪತ್ತೆಯಗಿದೆ.

Facebook Comments

Sri Raghav

Admin