ಕೆಂಪೇಗೌಡರ ಸೊಸೆ ಲಕ್ಷ್ಮಿದೇವಮ್ಮ ಪ್ರತಿಮೆಗೆ ಇನ್ನು ನಿತ್ಯ ಮಾಲಾರ್ಪಣೆ

ಈ ಸುದ್ದಿಯನ್ನು ಶೇರ್ ಮಾಡಿ

mayor--01

ಬೆಂಗಳೂರು, ಅ.31-ಇನ್ನು ಮುಂದೆ ಪ್ರತಿದಿನ ಕೆಂಪೇಗೌಡರ ಸೊಸೆ ಲಕ್ಷ್ಮಿದೇವಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡುತ್ತೇನೆ ಎಂದು ಪಾಲಿಕೆಸಭೆಯಲ್ಲಿಂದು ಮೇಯರ್ ಸಂಪತ್‍ರಾಜ್ ಹೇಳಿದರು. ಸಭೆಯಲ್ಲಿ ಬಿಜೆಪಿ ಸದಸ್ಯರು ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಗುತ್ತಿದೆ. ಆದರೆ ಅವರ ಸೊಸೆ ಲಕ್ಷ್ಮಿದೇವಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡುತ್ತಿಲ್ಲ. ಏಕೆ ನಿಮ್ಮಲ್ಲಿ ಕೆಂಪೇಗೌಡರ ಸೊಸೆಗೆ ಮಾಲಾರ್ಪಣೆ ಮಾಡಲು ಹಣವಿಲ್ಲವೇ, ಇಷ್ಟು ಆರ್ಥಿಕ ಸ್ಥಿತಿ ಹದಗೆಟ್ಟುಹೋಗಿದೆ ಎಂದು ಮೂದ ಲಿಸಿದರು.ನಗರಕ್ಕೆ ಲಕ್ಷ್ಮಿದೇವಮ್ಮ ಕೊಡುಗೆ ಏನು ಇಲ್ಲವೇ ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್ ಹಿಂದಿನ ಮೇಯರ್ ಪದ್ಮಾವತಿ ಅವರ ಅಧಿಕಾರಾವಧಿಯಲ್ಲಿ 56 ಲಕ್ಷ ವೆಚ್ಚದಲ್ಲಿ ಪಾಲಿಕೆ ಕೇಂದ್ರ ಕಚೇರಿ ಮುಂಭಾಗದಲ್ಲಿ ಲಕ್ಷ್ಮಿದೇವಿ ಪ್ರತಿಮೆ ಸ್ಥಾಪಿಸಲಾಗಿದೆ. ಇನ್ನು ಮುಂದೆ ಪ್ರತಿದಿನ ಈ ಪ್ರತಿಮೆಗೂ ಮಾಲಾರ್ಪಣೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.

Facebook Comments

Sri Raghav

Admin