ಕೆರೆಯಲ್ಲಿ ಈಜಲು ಹೋದ ಐಟಿಐ ವಿದ್ಯಾರ್ಥಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ತುರುವೇಕೆರೆ, ಅ.31-ಸ್ನೇಹಿತರೊಂದಿಗೆ ಕೆರೆಗಿಳಿದ ಐಟಿಐ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಪಟ್ಟಣ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪಟ್ಟಣದ ಸರ್ಕಾರಿ ಕಾಲೇಜಿನ ಐಟಿಐ ವಿದ್ಯಾರ್ಥಿ ಶರತ್ (17) ಮೃತ ದುರ್ದೈವಿ. ತಾಲೂಕಿನ ಮಲ್ಲಾಘಟ್ಟ ಕೆರೆಗೆ ಸ್ನೇಹಿತರೊಂದಿಗೆ ತೆರಳಿದ್ದ ಶರತ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಮೃತನು ಮೂಲತಃ ಮಡ್ಯಜಿಲ್ಲೆಯ ದೊಡ್ಡಕ್ಯಾತನಹಳ್ಳಿ ಗ್ರಾಮದ ಶಿಕ್ಷಕ ಶ್ರೀರಾಮಪ್ರಸಾದ್ ಪುತ್ರನಾಗಿದ್ದು, ತಾಲೂಕಿನ ಕರಿಗೊಂಡನಹಳ್ಳಿ ಗ್ರಾಮದ ಅಜ್ಜಿ ಮನೆಯಿಂದ ಕಾಲೇಜಿಗೆ ಹೋಗುತ್ತಿದ್ದ ಎನ್ನಲಾಗಿದೆ.

ಈ ಬಾರಿ ಸುರಿದ ಭಾರೀ ಮಳೆಯಿಂದ ಮಲ್ಲಾಘಟ್ಟ ಕೆರೆ ತುಂಬಿ ತುಳುಕುತ್ತಿದ್ದು, ಶರತ್ ಕಾಲೇಜು ಸ್ನೇಹಿತರೊಂದಿಗೆ ಕೆರೆಗೆ ಈಜಲು ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪಟ್ಟಣ ಠಾಣೆ ಪೊಲೀಸರು, ಅಗ್ನಿ ಶಾಮಕ ದಳದವರು ಹಾಗೂ ಸ್ಥಳಿಯರ ನೆರವಿನಿಂದ ಶರತ್ ದೇಹವನ್ನು ಹೊರತೆಗೆದಿದ್ದಾರೆ. ಈ ಸಂಬಂಧ ತುರುವೇಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನಿಬ್ಬರು ಸ್ನೇಹಿತರು ಪ್ರಾಣಾಪಾಯದಿಂದ ಪಾರಾಗಿದ್ದು, ಪೋಷಕರ ರೋಧನ ಮುಗಿಲು ಮುಟ್ಟಿತ್ತು.

Facebook Comments