ನದಿ ದಾಟಲು ಹೋಗಿ ತಾಯಿ-ಮಗ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

dead-body-2
ಕುಣಿಗಲ್, ಅ.31-ನದಿ ದಾಟಲು ಹೋಗಿ ತಾಯಿ-ಮಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಅಮೃತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಸವನ ಮತ್ತಿಕೆರೆ ಗ್ರಾಮದ ನಿವಾಸಿಗಳಾದ ಜಯಲಕ್ಷ್ಮಿ (45), ವೆಂಕಟೇಶ್(18) ಮೃತಪಟ್ಟ ತಾಯಿ-ಮಗ.
ನಿನ್ನೆ ಕಾರ್ತೀಕ ಸೋಮವಾರದ ಪ್ರಯುಕ್ತ ಕಗ್ಗೆರೆ ದೇವಸ್ಥಾನಕ್ಕೆಂದು ತೆರಳಿದ್ದಾರೆ. ಈ ವೇಳೆ ನಾಗಿಣಿ ನದಿ ದಾಟುವಾಗ ಮಗ ವೆಂಕಟೇಶ್ ಕಾಲು ಜಾರಿ ನದಿಗೆ ಬಿದ್ದಿದ್ದಾನೆ. ತಕ್ಷಣ ಮಗನನ್ನು ರಕ್ಷಿಸಲು ತಾಯಿ ಜಯಲಕ್ಷ್ಮಿಮುಂದಾಗಿದ್ದಾರೆ. ಈ ವೇಳೆ ನದಿಯ ಸುಳಿಯಲ್ಲಿ ಸಿಲುಕಿದ್ದಾರೆ. ಪಕ್ಕದ ಜಮೀನಿನಲ್ಲಿ ಕೆಲಸ ಮಾಡುವವರು ಇವರನ್ನು ನೋಡಿ ರಕ್ಷಿಸಲು ಮುಂದಾಗಿದ್ದಾರೆ. ಆದರೂ ಇಬ್ಬರು ಮುಳುಗಿ ಸಾವನ್ನಪ್ಪಿದ್ದಾರೆ. ಅಮೃತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.

Facebook Comments

Sri Raghav

Admin