2022ರೊಳಗೆ ಕೇಂದ್ರ 300 ಮಿಲಿಯನ್ ಟನ್ ಉಕ್ಕು ಉತ್ಪಾದನೆ ಗುರಿ

ಈ ಸುದ್ದಿಯನ್ನು ಶೇರ್ ಮಾಡಿ

centrel-minister

ಬೆಂಗಳೂರು, ಅ. 31- ದೇಶದಲ್ಲಿ ಉತ್ಕಷ್ಟ ಗುಣಮಟ್ಟದ ಉಕ್ಕು ತಯಾರಿಕೆಗೆ ಕೇಂದ್ರ ಸರ್ಕಾರ ಒತ್ತು ನೀಡಿದ್ದು, 2022ರ ವೇಳೆಗೆ 300 ಮಿಲಿಯನ್ ಟನ್ ಉಕ್ಕು ಉತ್ಪಾದಿಸುವ ಗುರಿ ಹೊಂದಲಾಗಿದೆ ಎಂದು ಕೇಂದ್ರ ಗಣಿಖಾತೆ ರಾಜ್ಯ ಸಚಿವ ಚೌಧರಿ ಬೀರೇಂದ್ರ ಸಿಂಗ್ ಇಂದಿಲ್ಲಿ ಹೇಳಿದ್ದಾರೆ. ಉತ್ಕಷ್ಟ ಉಕ್ಕು ತಯಾರಿಸುವ ಸಂಬಂಧ ಕೇಂದ್ರ ಸರ್ಕಾರ ಹೊಸನೀತಿ ಜಾರಿಗೆ ತಂದಿದ್ದು, ಉತ್ಕಷ್ಟ ಗುಣ ಮಟ್ಟದ ಉಕ್ಕು ತಯಾರಿಕೆಗೆ ವಿದೇಶಿ ನೇರ ಬಂಡವಾಳ ಆಕರ್ಷಿಸಲು ಮುಂದಾಗಿದ್ದು, ವಿದೇಶಿ ತಂತ್ರಜ್ಞಾನವನ್ನು ಇಲ್ಲಿಗೆ ವರ್ಗಾಯಿಸುವಂತೆ ಷರತ್ತು ಹಾಕಲಾಗಿದೆ ಎಂದು ಹೇಳಿದರು.

ಕೋರಮಂಗಲದಲ್ಲಿರುವ ಕುದುರೆಮುಖ ಕಬ್ಬಿಣ ಮತ್ತು ಅದಿರು ಕಾರ್ಖಾನೆಯ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಏಕತಾ ದಿವಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕುದುರೆಮುಖ ಮಿನಿ ರತ್ನವಾಗಿದ್ದು, ನವರತ್ನವಾಗುವ ನಿಟ್ಟಿನಲ್ಲಿ ಹೆಜ್ಜೆ ಇಡುವಂತೆ ಇದೇ ವೇಳೆ ಕಿವಿಮಾತು ಹೇಳಿದರು.ಕುದುರೆಮುಖ ಕಬ್ಬಿಣ ಮತ್ತು ಅದಿರು ಕಾರ್ಖಾನೆಗೆ ಗಣಿ ನೀಡುವುದು ರಾಜ್ಯ ಸರ್ಕಾರದ ಕೆಲಸ. ರಾಜ್ಯಸರ್ಕಾರಕ್ಕೆ ಕೇಂದ್ರ ಸರ್ಕಾರ ಎಲ್ಲ ರೀತಿಯ ಸಹಾಯ-ಸಹಕಾರ ನೀಡಲು ಸಿದ್ಧವಿದೆ. ಆದರೆ, ಗಣಿ ನಿಕ್ಷೇಪ ಗುರುತಿಸುವುದು ರಾಜ್ಯಸರ್ಕಾರಕ್ಕೆ ಸೇರಿರುವುದು ಎಂದು ಹೇಳಿದರು.

ದೇಶ ಉತ್ಕಷ್ಟ ಗುಣಮಟ್ಟದ ಉಕ್ಕು ತಯಾರಿಸಲು ಜಂಟಿ ಪಾಲುದಾರಿಕೆಗೂ ಸಿದ್ಧವಿದೆ. ಬಳ್ಳಾರಿಯಲ್ಲಿ 1.5 ಬಿಲಿಯನ್‍ಟನ್ ಸಾಮಥ್ರ್ಯದ ಉಕ್ಕು ತಯಾರಿಕಾ ಘಟಕ ಸ್ಥಾಪಿಸುವ ಸಂಬಂಧ ಅರ್ಸಲ್ ಮಿತ್ತಲ್ ಕಂಪೆನಿಯೊಂದಿಗೆ ಅಂತಿಮ ಹಂತದ ಮಾತುಕತೆ ನಡೆಯುತ್ತಿದೆ.ಅದು ಅಂತಿಮವಾದರೆ ಭಾರತ ಉತ್ತಮ ಗುಣಮಟ್ಟದ ಉಕ್ಕನ್ನು ರಫ್ತು ಮಾಡುವ ದೇಶವಾಗಿ ಹೊರಹೊಮ್ಮಲಿದೆ ಎಂದು ಹೇಳಿದರು. ಭೂಸ್ವಾಧೀನ ಸಮಸ್ಯೆಯಿಂದಾಗಿ ಪಾಸ್ಕೊ ಕಂಪೆನಿ ಕೆಲಸ ಮಾಡದೆ ಬಿಟ್ಟು ಹೋಗಿದೆ ಎಂದು ಹೇಳಿದ ಅವರು, ಗುಣಮಟ್ಟದ ಉಕ್ಕು ತಯಾರಿಕೆಯಲ್ಲಿ ಭಾರತ ಶೇ.1.4ರಷ್ಟಿದ್ದು, ಅದು ಮುಂಬರುವ ದಿನಗಳಲ್ಲಿ ಶೇ.4 ರಿಂದ 6ಕ್ಕೆ ಏರಿಸುವ ಉದ್ದೇಶವಿದೆ. ಸದ್ಯ ಉತ್ಕಷ್ಟ ಗುಣಮಟ್ಟದ ಉಕ್ಕನ್ನು ಚೈನಾ ಸೇರಿದಂತೆ ವಿವಿಧ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದು, ತಯಾರಿಕಾ ಘಟಕ ದೇಶದಲ್ಲೇಆದರೆ ಉತ್ಪಾದನೆಗೆ ಸಹಕಾರಿಯಾಗಲಿದೆ ಎಂದು ಹೇಳಿದರು. ಸರ್ದಾರ್ ವಲ್ಲಭಭಾಯ್ ಪಟೇಲ್‍ಅವರು ದೇಶದಲ್ಲಿ ರಾಜಕೀಯ ಪಕ್ಷಗಳನ್ನು ಒಗ್ಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ, ನರೇಂದ್ರಮೋದಿ ದೇಶವನ್ನುಆರ್ಥಿಕವಾಗಿಒಗ್ಗೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಚೌಧರಿ ಬೀರೇಂದ್ರ ಸಿಂಗ್ ಹೇಳಿದರು. ಜನ್‍ಧನ್ ಯೋಜನೆ ಮೂಲಕ ಎಲ್ಲ ಬಡ ಜನರಿಗೆ ಬ್ಯಾಂಕ್ ಖಾತೆ ತೆರೆಯುವ ಮೂಲಕ ಜಿಎಸ್‍ಟಿ ಯೋಜನೆಯಿಂದ ದೇಶವನ್ನುಆರ್ಥಿಕವಾಗಿ ಒಂದುಗೂಡಿಸುವ ಕೆಲಸ ಮಾಡಿದ್ದಾರೆ ಎಂದು ಗುಣಗಾನ ಮಾಡಿದರು.

Facebook Comments

Sri Raghav

Admin