32 ಮಂದಿ ಸಾಧಕರಿಗೆ ತುಮಕೂರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಈ ಸುದ್ದಿಯನ್ನು ಶೇರ್ ಮಾಡಿ

Rajyotsava-Award-01
ತುಮಕೂರು, ಅ.31-ಪ್ರಸಕ್ತ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ 32 ಮಂದಿ ಸಾಧಕರು ಭಾಜನರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಮೋಹನ್‍ರಾಜ್ ತಿಳಿಸಿದ್ದಾರೆ. ಸಂಗೀತ (ಸುಗಮ, ನೃತ್ಯ, ಹರಿಕಥೆ, ಗಮಕ) ಕ್ಷೇತ್ರದಲ್ಲಿ ಕ್ಯಾತಸಂದ್ರದ ಬ್ರಹ್ಮಚಾರ್, ಅಂತರಸನಹಳ್ಳಿಯ ನಾಟಕ ಕಲಾವಿದ ಎ.ಸಿ.ಶಿವಣ್ಣ, ಸಂಗೀತ ಕಲಾವಿದೆ ಸುಧಾರತ್ನ , ರಂಗಭೂಮಿ-ಕೊರಟಗೆರೆಯ ಬಿ.ಟಿ.ರಂಗಣ್ಣ, ತುಮಕೂರಿನ ಆನಂದ್‍ಕುಮಾರ್, ಸೀತಾರಾಮಯ್ಯ, ಕೆ.ಆರ್.ಶಿವಾನಂದ, ಕ್ರೀಡೆ- ಎಚ್.ಎ.ವಿಜಯ್‍ಕುಮಾರ್, ಸಾಹಿತ್ಯ-ತುಮಕೂರಿನ ಬಡ್ಡಿಹಳ್ಳಿ ಎಚ್.ಕಮಲಮ್ಮ, ತೋವಿನಕೆರೆಯ ಡಾ.ಟಿ.ಎಸ್.ವಿವೇಕಾನಂದ, ಪಾವಗಡದ ಮುದ್ದು ವೀರಪ್ಪ, ಸಮಾಜಸೇವೆ- ಗೀತಾನಾಗೇಶ್, ಮುಬಾರಕ್ ಸುಲ್ತಾನ್, ವೈದ್ಯಕೀಯ-ಡಾ.ಎಸ್.ಟಿ.ಸತ್ಯನಾರಾಯಣ, ಜಾನಪದ-ಮಧುಗಿರಿ ರಾಮಚಂದ್ರ, ಮಲ್ಲಪ್ಪ ಕೆ. ಬಸವನಹಳ್ಳಿ, ಗುಬ್ಬಿಯ ಎಂ.ಬಿ.ರಾಜೇಂದ್ರಕುಮಾರ್, ಶಿರಾದ ಜಯಣ್ಣ, ಮುನಿಯಪ್ಪ, ಶಿಲ್ಪಕಲೆ/ಚಿತ್ರಕಲೆ -ಮಧುಗಿರಿ ಜಿ.ಶಿವಕುಮಾರ್, ಪತ್ರಿಕೋದ್ಯಮ-ಕೊರಟಗೆರೆ ಪದ್ಮನಾಭಯ್ಯ, ಚಿಕ್ಕನಾಯಕನಹಳ್ಳಿ ಸಾ.ಚಿ.ರಾಜ್‍ಕುಮಾರ, ತಿಪಟೂರು ಕೃಷ್ಣ, ಕುಣಿಗಲ್ ಆನಂದ್ ಸಿಂಗ್, ತುಮಕೂರು ಸಿ.ಜಯಣ್ಣ, ಶಿಕ್ಷಣ-ತುರುವೇಕೆರೆಯ ಎಚ್.ಎಸ್.ಶೇಷಾದ್ರಿ, ಕೃಷಿ-ಚಿಕ್ಕನಾಯಕನಹಳ್ಳಿ ಅರುಣ್‍ಕುಮಾರ್, ಸಂಘಟನೆ-ತುಮಕೂರು ಪಿ.ಗಂಗರಾಜ್, ತನುಜ್‍ಕುಮಾರ್, ತಿಪಟೂರು ವಿಜಯ್‍ಕುಮಾರ್ ಭಾಜನರಾಗಿದ್ದಾರೆ.

Facebook Comments

Sri Raghav

Admin