ಕಳೆದ ವರ್ಷ ಲಂಚ ನೀಡಿದವರ ಪ್ರಮಾಣ ಶೇ.50ರಷ್ಟು..!

ಈ ಸುದ್ದಿಯನ್ನು ಶೇರ್ ಮಾಡಿ

Corruption-002

ನವದೆಹಲಿ, ನ.1-ಭ್ರಷ್ಟಾಚಾರ ಮತ್ತು ಲಂಚಾವತಾರವನ್ನು ಮೂಲೋತ್ಪಾಟನೆ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬೊಬ್ಬೆ ಹಾಕುತ್ತಿದ್ದರೂ, ದೇಶದಲ್ಲಿ ಈ ಪಿಡುಗು ಅವ್ಯಾಹತವಾಗಿಯೇ ಮುಂದುವರಿದಿದೆ. ಇದಕ್ಕೆ ಪುಷ್ಟಿ ನೀಡುವಂತೆ ಕಳೆದ ವರ್ಷ ವಿವಿಧ ಮೂಲಭೂತ ಸರ್ಕಾರಿ ಸೇವೆಗಳನ್ನು ಪಡೆಯಲು ಶೇಕಡ 50ರಷ್ಟು ಮಂದಿ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಲಂಚ ನೀಡಿದ್ದಾರೆ ಎಂಬ ಅಂಶ ಸಮೀಕ್ಷೆಯೊಂದರಿಂದ ಬೆಳಕಿಗೆ ಬಂದಿದೆ.

ಸ್ಥಳೀಯ ಮಟ್ಟದಲ್ಲಿ ಕೆಲಸ ಮಾಡಿಸಿಕೊಳ್ಳಲು ಪೊಲೀಸ್ ಇಲಾಖೆ, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಶೇ.50ರಷ್ಟು ಮಂದಿ ಲಂಚ ನೀಡಿದ್ದಾರೆ. ಅಲ್ಲದೇ ಮೌಲ್ಯವರ್ಧಿತ ತೆರಿಗೆ ಸಂಬಂಧ 10 ಮಂದಿಯಲ್ಲಿ ಎಂಟು ಜನರು ಲಂಚ ಕೊಟ್ಟಿದ್ದಾರೆ ಎಂಬುದು ಆನ್‍ಲೈನ್ ಪೋರ್ಟಲ್ ನಡೆಸಿದ ಸಮೀಕ್ಷೆಯಿಂದ ದೃಢಪಟ್ಟಿದೆ. ಲೋಕಲ್ ಸರ್ಕಲ್ ಎಂಬ ಪೋರ್ಟಲ್ ದೇಶದ ಭ್ರಷ್ಟಾಚಾರ ಕುರಿತ ಸಮೀಕ್ಷೆ ನಡೆಸಿದ್ದು, ಸುಮಾರು ಒಂದು ಲಕ್ಷ ಮಂದಿಯಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ. 8 ಪ್ರಶ್ನೆಗಳಿಗೆ 200 ನಗರಗಳಲ್ಲಿ ಅಭಿಪ್ರಾಯ ಸಂಗ್ರಹಿಸಲಾಗಿದೆ. ಎಷ್ಟು ಬಾರಿ ಕೈ ಬಿಸಿ ಮಾಡಲಾಗಿದೆ ಎಂಬ ಪ್ರಶ್ನೆಗೆ ಶೇ.25ರಷ್ಟು ಮಂದಿ ಹಲವು ಬಾರಿ ಎಂದು ಉತ್ತರಿಸಿದ್ದಾರೆ.

Facebook Comments

Sri Raghav

Admin