ರಾಷ್ಟ್ರಪತಿಯಾಗಿ 100 ದಿನ ಪೂರೈಸಿದ ರಾಮನಾಥ್ ಕೋವಿಂದ್

ಈ ಸುದ್ದಿಯನ್ನು ಶೇರ್ ಮಾಡಿ

Ramanath-Kovind

ನವದೆಹಲಿ, ನ.1-ಸಮಯ ಪಾಲನೆ ಮತ್ತು ತ್ವರಿತ ನಿರ್ಧಾರ ಕೈಗೊಳ್ಳುವಿಕೆ-ಇವೆರಡಕ್ಕೆ ಆದ್ಯತೆ ನೀಡುತ್ತಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ದೇಶದ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿ ಇಂದಿಗೆ 100 ದಿನಗಳು ಪೂರ್ಣಗೊಂಡಿವೆ.  ಕೋವಿಂದ್ ಕಳೆದ ಜುಲೈ 25ರಂದು ಭಾರತದ 14ನೇ ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದರು.  ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಮಹತ್ವದ ಭಾಗವಾಗಿರುವ ಎಲ್ಲ ರಾಜ್ಯಗಳಿಗೂ ಭೇಟಿ ನೀಡುವುದು ರಾಷ್ಟ್ರಪತಿಯವರ ಉದ್ದೇಶ. ಈಗಾಗಲೇ ಹಲವು ರಾಜ್ಯಗಳಲ್ಲಿ ಅಧಿಕೃತ ಪ್ರವಾಸ ಕೈಗೊಂಡಿರುವ ಕೋವಿಂದ್, ಈ ವರ್ಷಾಂತ್ಯಕ್ಕೆ ಭಾರತದ ಬಹುತೇಕ ಎಲ್ಲ ಪ್ರಾಂತ್ಯಗಳನ್ನು ವ್ಯಾಪಿಸಲು ಉದ್ದೇಶಿಸಿದ್ದಾರೆ ಎಂದು ರಾಷ್ಟ್ರಪತಿ ಭವನದ ಉನ್ನತಾಧಿಕಾರಿಗಳು ತಿಳಿಸಿದ್ದಾರೆ.

ರಾಷ್ಟ್ರಪತಿಯವರು ಕೈಗೊಂಡ ಪ್ರವಾಸದಲ್ಲಿ ಎನ್‍ಡಿಎಯೇತರ ಪಕ್ಷಗಳ ಆಡಳಿತ ಇರುವ ಕರ್ನಾಟಕ ಮತ್ತು ಕೇರಳ ಸೇರಿದಂತೆ ಅನೇಕ ರಾಜ್ಯಗಳಿಗೆ ಭೇಟಿ ನೀಡಿದ್ದಾರೆ. ಅತ್ಯುನ್ನತ ಹುದ್ದೆಯಲ್ಲಿರುವವರು ಪಕ್ಷಾತೀತ ಅಗ್ರ ನಾಯಕರು ಎಂಬುದನ್ನು ಸಾಬೀತು ಮಾಡುವುದು ಇದರ ಉದ್ದೇಶ.  ಕೋವಿಂದ್ ಅವರು ಗ್ರಾಮಾಂತರ ಮತ್ತು ಗಡಿ ಪ್ರಾಂತ್ಯದ ರಾಜ್ಯಗಳಿಗೂ ಭೇಟಿ ನೀಡಿದ್ದಾರೆ. ರಾಷ್ಟ್ರಪತಿಯವರು ತೋರಿಕೆಗಾಗಿ ರಾಜ್ಯಗಳಲ್ಲಿ ಪ್ರವಾಸ ಕೈಗೊಳ್ಳುತ್ತಿಲ್ಲ. ಬದಲಿಗೆ ಅವುಗಳ ಸಂಸ್ಕøತಿ ಮತ್ತು ಪರಂಪರೆಗೆ ಒತ್ತು ನೀಡುವ ಜೊತೆಗೆ ರಾಷ್ಟ್ರ ನಿರ್ಮಾಣದಲ್ಲಿ ಅವು ಮಹತ್ವದ ಕೊಡುಗೆ ನೀಡಬೇಕೆಂಬುದು ಅವರ ಮೂಲ ಉದ್ದೇಶವಾಗಿದೆ.

ರಾಷ್ಟ್ರಪತಿಯವರು ಕಳೆದ ತಿಂಗಳು 3 ರಿಂದ 6ರವರೆಗೆ ಜಿಬೌಟಿ ಮತ್ತು ಇಥಿಯೋಪಿಯಾಗೆ ತಮ್ಮ ಚೊಚ್ಚಲ ವಿದೇಶ ಪ್ರವಾಸ ಮಾಡಿದರು.
ಕೋವಿಂದ್ ಅವರ ಸಮಯ ಪಾಲನೆ ಮತ್ತು ತ್ವರಿತ ನಿರ್ಧಾರಗಳಿಂದಾಗಿ, ವಿದೇಶಿ ರಾಯಭಾರಿಗಳು ಮತ್ತು ಹೈ ಕಮಿಷನರ್‍ಗಳಿಂದ ಔಪಚಾರಿಕ ಶಿಷ್ಟಾಕಾರಗಳಿಗೆ ಕಾಯಬೇಕಾದ ಸಮಯ ಕಡಿಮೆಯಾಗಿದೆ. ರಷ್ಯಾ ರಾಯಭಾರಿ ಮತ್ತು ಪಾಕಿಸ್ತಾನ ಹೈಕಮಿಷನರ್ ಸೇರಿದಂತೆ 12 ಅಂಬಾಸಿಡರ್‍ಗಳು ಮತ್ತು ರಾಜತಾಂತ್ರಿಕರಿಗೆ ಶಿಷ್ಟಾಚಾರಗಳು ಕ್ಷಿಪ್ರವಾಗಿ ಲಭಿಸಿವೆ. ಈ ಹಿಂದೆ ಇದಕ್ಕಾಗಿ ಒಂದು ತಿಂಗಳು ಬೇಕಾಗುತ್ತಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಕೋವಿಂದ್ ಅವರು ರಾಷ್ಟ್ರಪತಿ ಭವನ ಜನರಿಗೆ ಹತ್ತಿರವಾಗಬೇಕೆಂಬ ಧ್ಯೇಯದೊಂದಿಗೆ ಹಲವಾರು ಕ್ರಮಗಳನ್ನು ಕೈಗೊಂಡಿದ್ದಾರೆ. ಸಾಮಾನ್ಯ ಜನರಿಗೂ ಆನ್‍ಲೈನ್ ಮೂಲಕ ರಾಷ್ಟ್ರಪತಿ ಭವನದ ಗ್ರಂಥಾಲಯ ಲಭ್ಯವಾಗುವಂತೆ ಮಾಡಿರುವುದು ಅವರು ಈ ನಿಟ್ಟಿನಲ್ಲಿ ಕೈಗೊಂಡ ಕ್ರಮವಾಗಿದೆ ಎಂದು ವಿವರಿಸಲಾಗಿದೆ.

ನೊಬೆಲ್ ಪ್ರಶಸ್ತಿ ಪುರಸ್ಕøತ ಕೈಲಾಶ್ ಸತ್ಯಾರ್ಥಿಯವರು ಮಕ್ಕಳ ಮೇಲಿನ ದುರಾಚಾರ ಮತ್ತು ಕಳ್ಳಸಾಗಣೆ ತಡೆಗಟ್ಟಲು ಹಮ್ಮಿಕೊಂಡಿರುವ ಭಾರತ್ ಯಾತ್ರೆಗೆ ರಾಷ್ಟ್ರಪತಿ ಭವನ ವೇದಿಕೆಯಾಗಿತ್ತು. ಈ ಸಂದರ್ಭದಲ್ಲಿ ಪರಿಶಿಷ್ಟ ಜÁತಿಗೆ ಸೇರಿದ ನಿರ್ಗತಿಕ ಬಾಲಕಿಯನ್ನು ಪಕ್ಕದಲ್ಲಿ ಕೂರಿಸಿಕೊಂಡಿದ್ದು ಗಮನಸೆಳೆದಿತ್ತು. ಕೋವಿಂದ್ ಅವರ ಸದ್ಭಾವನೆಗೆ ಸತ್ಯಾರ್ಥಿ ಕೈಬರಹದ ಪ್ರಶಂಸನಾ ಪತ್ರದಲ್ಲಿ ಕೊಂಡಾಡಿದ್ದಾರೆ.

Facebook Comments

Sri Raghav

Admin