ಹೆಚ್ಚುತ್ತಿದೆ ಅನ್ಯ ದೇಶಗಳ ಸೇನಾ ಚಟುವಟಿಕೆ : ರಕ್ಷಣಾ ಸಚಿವರ ಕಳವಳ

ಈ ಸುದ್ದಿಯನ್ನು ಶೇರ್ ಮಾಡಿ

Nirmala-Seetaraman--01

ಪಣಜಿ, ನ.1-ಹಿಂದೂ ಮಹಾಸಾಗರದ ಬಳಿ ಒಂದಿಲ್ಲೊಂದು ಸೋಗಿನಲ್ಲಿ ಹೆಚ್ಚುವರಿ ಪ್ರಾದೇಶಿಕ ದೇಶಗಳ ಸೇನಾ ಚಟುವಟಿಕೆಗಳು ಹೆಚ್ಚಾಗುತ್ತಿರುವ ಬಗ್ಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಕಳವಳ ವ್ಯಕ್ತಪಡಿಸಿದ್ದಾರೆ. ಕರಾವಳಿ ರಾಜ್ಯಗಳ ಸಾಗರ ಪ್ರದೇಶಗಳಿಗೆ ಉಂಟಾಗಿರುವ ಆತಂಕ ನಿಭಾಯಿಸಲು ಗೋವಾದಲ್ಲಿ ನಡೆದ ಸಾಗರ ರಕ್ಷಣೆ ಸಮಾವೇಶದಲ್ಲಿ ಮಾತನಾಡಿದ ಅವರು, ಇಂಥ ಸೇನಾ ಚಟುವಟಿಕೆಗಳಿಂದ ನೆರೆಹೊರೆ ದೇಶಗಳ ಸಂರ್ಕಿಣತೆಗಳೂ ಹೆಚ್ಚಾಗುತ್ತಿವೆ ಎಂದು ಅವರು ಹೇಳಿದರು. ಹಿಂದೂ ಮಹಾಸಾಗರವು ಕಳೆದ ಕೆಲವು ದಶಕಗಳಿಂದ ಶಾಂತವಾಗಿದೆ. ಆದಾಗ್ಯೂ, ಎದುರಾಗುತ್ತಿರುವ ಸವಾಲುಗಳನ್ನು ನಾವು ಹೇಗೆ ನಿಭಾಯಿಸುತ್ತೇವೆ ಎಂಬ ಸಾಮೂಹಿಕ ನಿರ್ಧಾರದದ ಮೇಲೆ ಭವಿಷ್ಯದಲ್ಲಿ ಪ್ರಾದೇಶಿಕ ಶಾಂತಿ ಮತ್ತು ಭದ್ರತೆ ಮೇಲೆ ಗಮನಾರ್ಹ ಪ್ರಭಾವ ಬೀರುತ್ತದೆ ಎಂದು ಅವರು ಹೇಳಿದರು.

Facebook Comments

Sri Raghav

Admin