ತುರುವೇಕೆರೆ ಅಭಿವೃದ್ಧಿಗೆ ಶ್ರಮಿಸುವೆ : ಶಾಸಕ ಎಂ.ಟಿ. ಕೃಷ್ಣಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

Turuvekere
ತುರುವೇಕೆರೆ, ನ.2- ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ತಾಲ್ಲೂಕಿನ ಅಭಿವೃದ್ಧಿಗೆ ಶ್ರಮಿಸುವುದಾಗಿ ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು. ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಕನ್ನಡರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಪಟ್ಟಣದಲ್ಲಿ ತಾಲ್ಲೂಕು ಕನ್ನಡ ಭವನದ ನಿರ್ಮಾಣಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಜಿಲ್ಲಾ ಪಂಚಾಯಿತಿ ಸದಸ್ಯೆ ರೇಣುಕ ಕೃಷ್ಣಮೂರ್ತಿ ಮಾತನಾಡಿ, ಕರ್ನಾಟಕ ಶಿಲ್ಪ, ಕಲೆಗಳ ತವರೂರು, ಚಿನ್ನದ ನಾಡು, ಸಾಹಿತ್ಯಾಸಕ್ತರ ನೆಲೆವೀಡು, ಎಂ.ಗೋವಿಂದ ಪೈ, ಕುವೆಂಪು, ದ.ರಾ.ಬೇಂದ್ರೆಯಂತಹ ಮಹಾನ್ ಕವಿಗಳನ್ನು ಸೃಷ್ಟಿಸಿದ ತಾಯಿ ಕನ್ನಡ ಮಾತೆಗೆ ನನ್ನ ನಮನಗಳು ಎಂದರು.

ತಹಶೀಲ್ದಾರ್ ಪ್ರದೀಪ್‍ಕುಮಾರ್ ಕನ್ನಡ ದ್ವಜಾರೋಹಣ ನೆರವೇರಿಸಿ, ನಾಡು, ನುಡಿಯ ಸಂರಕ್ಷಣೆಗೆ ನಾವೆಲ್ಲರೂ ಕಂಕಣ ಬದ್ಧರಾಗೋಣ ಎಂಬ ಸಂದೇಶ ನೀಡಿದರು. ಪ್ರಾಂಶುಪಾಲ ಭೈರವೇಗೌಡ, ಕಸಾಪ ಅಧ್ಯಕ್ಷ ನಂ.ರಾಜು ಮಾತನಾಡಿದರು.
ಇದೇ ವೇಳೆ ವಿವಿಧ ಕ್ಷೇತ್ರಗಳ ಸಾಧಕರಾದ ರಾಮಕೃಷ್ಣಯ್ಯ, ನರಸಿಂಹಮೂರ್ತಿ, ರಂಗರಾಜು, ನಂಜುಂಡಯ್ಯ, ಮಾ.ಸು.ಅನಂತ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 125 ಅಂಕ ಪಡೆದ ತಾಲ್ಲೂಕಿನ 18 ಮಕ್ಕಳನ್ನು ಸನ್ಮಾನಿಸಿ, ಗೌರವಿಸಲಾಯಿತು. ವಿವಿಧ ಶಾಲಾ ಮಕ್ಕಳಿಂದ ಜನರುಗಿದ ಸಾಂಸ್ಕತಿಕ ಕಾರ್ಯಕ್ರಮ, ಸ್ತಬ್ದ ಚಿತ್ರಗಳ ಪ್ರದರ್ಶನ ಹಾಗೂ ನೃತ್ಯ ಪ್ರದರ್ಶನ ಪ್ರೇಕ್ಷಕರ ಮನಸೂರೆಗೊಂಡವು. ಸಮಾರಂಭದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನಾಗರತ್ನ, ಉಪಾಧ್ಯಕ್ಷೆ ತೀರ್ಥಕುಮಾರಿ, ಜಿ.ಪಂ.ಸದಸ್ಯೆ ಜಯಲಕ್ಷ್ಮಿ, ಇ.ಒ.ಗಂಗಾಧರ್, ಬಿ.ಇ.ಒ.ಮಂಜುನಾಥ್, ಸಿ.ಪಿ.ಐ.ಜಗದೀಶ್, ಜಿಲ್ಲಾ ತುಮುಲ್ ನಿರ್ದೇಶಕ ಸಿ.ವಿ.ಮಹಾಲಿಂಗಯ್ಯ ಸೇರಿದಂತೆ ವಿವಿಧ ಗಣ್ಯರು ಹಾಜರಿದ್ದರು.

Facebook Comments

Sri Raghav

Admin