ದುರಾಡಳಿತದ ಪರಿವರ್ತನೆಗಾಗಿ ಬಿಜೆಪಿಯಿಂದ ರ‍್ಯಾಲಿ : ಹೆಚ್.ಡಿ.ರೇವಣ್ಣ

ಈ ಸುದ್ದಿಯನ್ನು ಶೇರ್ ಮಾಡಿ

H-D-REVANNA
ಬೇಲೂರು,ನ.2- ಬಿಜೆಪಿ ಅಧಿಕಾರದಲ್ಲಿದ್ದಾಗ ಮಾಡಿದ ದುರಾಡಳಿತವನ್ನು ಪರಿವರ್ತನೆ ಮಾಡಿಕೊಳ್ಳಲು ರಾಜ್ಯಾದ್ಯಂತ ಪರಿವರ್ತನ ರ‍್ಯಾಲಿ ಮಾಡುತ್ತಿದೆ. ಆದರೆ ನಾವು ಅಂತಹ ಕೆಲಸ ಮಾಡಿಲ್ಲದ ಕಾರಣ ನಾವು ಜನರ ಮನೆ ಮನೆಗೆ ಹೋಗುತ್ತೇವೆ ಎಂದು ಶಾಸಕ ಹೆಚ್.ಡಿ.ರೇವಣ್ಣ ಹೇಳಿದರು. ಜೆಡಿಎಸ್ ಕಾರ್ಯಕರ್ತರ ಸಭೆಗೆ ಆಗಮಿಸಿದ ಸಂದರ್ಭ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೇಸ್ ಹಾಗೂ ಬಿಜೆಪಿ ಆಡಳಿತದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಬೇಲೂರು ಹಳೇಬೀಡಿನ ಎಲ್ಲ ಕೆರೆ ಕಟ್ಟೆಗಳಿಗೂ ನೀರು ಹರಿಸುವುದಾಗಿ ಹೇಳಿದ್ದರು. ಆದರೆ ನೀರು ಹರಿಸಿದರ ಇಲ್ಲಾ, ಆದರೆ ಮಾಜಿ ಪ್ರಧಾನಿ ದೇವೇಗೌಡರು ಬೇಲೂರಿನಲ್ಲಿ ಯಗಚಿ ಅಣೇಕಟ್ಟೆ ಕಟ್ಟಿಸಿದ್ದರಿಂದ ಎಲ್ಲರು ನೀರು ತೆಗೆದುಕೊಂಡು ಹೋಗುತಿದ್ದಾರೆ ಎಂದರು.

ಜಿಲ್ಲೆಯಲ್ಲಿ ಬೆಳೆ ಸಮೀಕ್ಷೆ ಮಾಡಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಆದರೆ ಮುಂಗಾರು ಮಳೆ ಕೈಕೊಟ್ಟಿದ್ದು ರೈತರ ಬಹುತೇಕ ಬೆಳೆಗಳು ನಾಶವಾಗಿವೆ. ಮಳೆಯ ಅಭಾವದಿಂದ ಆಲೂಗೆಡ್ಡೆ ಬೆಳೆ ಕೈಕೊಟ್ಟಿದ್ದರಿಂದ ಬೇಸತ್ತು ಗಿಡವನ್ನು ಕಿತ್ತುಹಾಕಿದ್ದು ಹೊಲಕ್ಕೆ ಹೋಗಿ ಅಧಿಕಾರಿಗಳು ಏನು ಸಮೀಕ್ಷೆ ಮಾಡುತ್ತಾರೆ ಎಂದು ಪ್ರಶ್ನಿಸಿದರು. ತಾಲೂಕು ಜೆಡಿಎಸ್ ಅಧ್ಯಕ್ಷ ತೊ.ಚ.ಅನಂತಸುಬ್ಬರಾಯ, ಕಾರ್ಯಾಧ್ಯಕ್ಷ ಬಿ.ಸಿ.ಮಂಜುನಾಥ್, ಜಿಲ್ಲಾಧ್ಯಕ್ಷ ಕೆ.ಎಸ್.ಲಿಂಗೇಶ್, ಹೆಚ್‍ಡಿಸಿ ಬ್ಯಾಂಕ್ ಉಪಾಧ್ಯಕ್ಷ ಎಂ.ಎ.ನಾಗರಾಜ್, ಪುರಸಭೆ ಅಧ್ಯಕ್ಷೆ ಭಾರತಿ ಅರುಣ್‍ಕುಮಾರ್, ಜಿಪಂ ಉಪಾಧ್ಯಕ್ಷ ಶ್ರೀನಿವಾಸ್, ಮಾಜಿ ಅಧ್ಯಕ್ಷ ಚಂದ್ರೇಗೌಡ, ಪುರಸಭೆ ಸದಸ್ಯ ಶ್ರೀನಿಧಿ, ಯುವ ಜೆಡಿಎಸ್ ಅಧ್ಯಕ್ಷ ಬಿಟ್ರುವಳ್ಳಿ ಉಮೇಶ್. ಎಪಿಎಂಸಿ ಅಧ್ಯಕ್ಷ ವಿಷ್ಣುಕುಮಾರ್. ಮಾಜಿ ಅಧ್ಯಕ್ಷ ಚಿನ್ನೇನಹಳ್ಳಿ ಮಹೇಶ್, ಇದ್ದರು.

Facebook Comments

Sri Raghav

Admin