ಭದ್ರತಾ ಪಡೆ ವಾಹನದ ಮೇಲೆ ಉಗ್ರರಿಂದ ಗುಂಡಿನ ದಾಳಿ, ಯೋಧರಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

Firing--00022

ಶ್ರೀನಗರ, ನ.2-ಕಾಶ್ಮೀರ ಕಣಿವೆಯಲ್ಲಿ ಭಾರೀ ವಿಧ್ವಂಸಕ ಕೃತ್ಯಕ್ಕೆ ಭಯೋತ್ಪಾದಕರು ಸಜ್ಜಾಗಿದ್ದಾರೆ ಎಂದು ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿದ್ದ ಬೆನ್ನಲ್ಲೇ ಅನಂತನಾಗ್ ಜಿಲ್ಲೆಯಲ್ಲಿ ಭದ್ರತಾ ಪಡೆ ವಾಹನದ ಮೇಲೆ ಉಗ್ರರು ಇಂದು ನಡೆಸಿದ ದಾಳಿಯಲ್ಲಿ ಐವರು ಸಿಆರ್‍ಪಿಎಫ್ ಯೋಧರು ಗಾಯಗೊಂಡಿದ್ದಾರೆ. ಲಜಿಬಲ್ ಪ್ರದೇಶದಲ್ಲಿ ಸಿಆರ್‍ಪಿಎಫ್‍ನ 96ನೇ ಬೆಟಾಲಿಯನ್ ವಾಹನವು ತೆರಳುತ್ತಿದ್ದಾಗ ಬೆಳಗ್ಗೆ 8.30ರಲ್ಲಿ ಉಗ್ರರು ಗುಂಡಿನ ದಾಳಿ ನಡೆಸಿದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೂವರು ಯೋಧರಿಗೆ ಗುಂಡೇಟು ಬಿದ್ದಿದ್ದು, ಇನ್ನಿಬ್ಬರಿಗೆ ವಾಹನದ ಕಿಟಕಿ ಗಾಜುಗಳಿಂದ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಉಗ್ರರಿಗಾಗಿ ಆ ಪ್ರದೇಶದಲ್ಲಿ ತೀವ್ರ ಶೋಧಕಾರ್ಯ ನಡೆಯುತ್ತಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಜ್ಬುಲ್ ಮುಜಾಹಿದೀನ್ (ಎಚ್‍ಎಂ) ಉಗ್ರರು ದೊಡ್ಡ ಮಟ್ಟದಲ್ಲಿ ದಾಳಿ ನಡೆಸಲಿದ್ದಾರೆ ಎಂದು ಗುಪ್ರಚರ ಸಂಸ್ಥೆಗಳು ಸರ್ಕಾರಕ್ಕೆ ನಿನ್ನೆಯಷ್ಟೇ ಮಾಹಿತಿ ನೀಡಿದ್ದವು. ಈ ಹಿನ್ನೆಲೆಯಲ್ಲಿ ಕಣಿವೆ ರಾಜ್ಯದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

ಅಲ್-ಖೈದಾ ಉಗ್ರಗಾಮಿ ಸಂಘಟನೆ ಭಾರತದ ನಾಯಕ ಝಾಕಿರ್ ಮುಸಾ, ಎಚ್‍ಎಂ ಭಯೋತ್ಪಾದಕರೊಂದಿಗೆ ಸಮಾಲೋಚನೆ ನಡೆಸಿದ್ದು, ಭಾರೀ ವಿಧ್ವಂಸಕ ಆಕ್ರಮಣಕ್ಕೆ ಸಂಚು ರೂಪಿಸುತ್ತಿದ್ದಾರೆ ಎಂದು ರಹಸ್ಯ ಮಾಹಿತಿ ಭದ್ರತಾ ಪಡೆಗಳಿಗೆ ಲಭಿಸಿದೆ. ಭಾರೀ ಶಸ್ತ್ರಾಸ್ತ್ರಗಳೊಂದಿಗೆ ಸನ್ನದ್ಧರಾಗಿರುವ ಮೂವರು ಕುಖ್ಯಾತ ಉಗ್ರರು ಗಡಿ ನಿಯಂತ್ರಣ ರೇಖೆಯನ್ನು ದಾಟಿ, ಪುಲ್ವಾಮ ಪ್ರದೇಶದಲ್ಲಿ ಅಡಗಿದ್ದು, ಯಾವುದೇ ಸಮಯದಲ್ಲಿ ದಾಳಿ ನಡೆಸುವ ಆತಂಕವಿದೆ ಎಂಬ ನಿಖರ ಮಾಹಿತಿ ಇದೆ.

Facebook Comments

Sri Raghav

Admin