ಅಕ್ರಮ ಅದಿರು ಪ್ರಕರಣವನ್ನು ಎಸ್‍ಐಟಿಗೆ ವಹಿಸಿರುವುದು ಸ್ವಾಗತಾರ್ಹ : ದತ್ತ

ಈ ಸುದ್ದಿಯನ್ನು ಶೇರ್ ಮಾಡಿ

datta

ಬೆಂಗಳೂರು, ನ.4-ಬೇಲೆಕೇರಿ ಅಕ್ರಮ ಅದಿರು ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಎಸ್‍ಐಟಿ ತನಿಖಾ ಸಂಸ್ಥೆಗೆ ವಹಿಸಿರುವುದನ್ನು ಸ್ವಾಗತಿಸುವುದಾಗಿ ಜೆಡಿಎಸ್ ಶಾಸಕ ವೈ.ಎಸ್.ವಿ.ದತ್ತ ಹೇಳಿದರು.  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಯಮೂರ್ತಿ ಸಂತೋಷ್ ಹೆಗಡೆ ಅವರು ಲೋಕಾಯುಕ್ತರಾಗಿದ್ದಾಗ ಅಕ್ರಮ ಅದಿರು ರಫ್ತಿಗೆ ಸಂಬಂಧಿಸಿದಂತೆ ವರದಿ ನೀಡಿದ್ದರು. ಆ ವರದಿ ರಾಜ್ಯ ವಿಧಾನಮಂಡಲದ ಉಭಯ ಸದನಗಳಲ್ಲೂ ಸಾಕಷ್ಟು ಚರ್ಚೆಯಾಗಿತ್ತು. ಸಮಗ್ರ ಸಾಕ್ಷ್ಯಾಧಾರಗಳು ಇಲ್ಲ ಎಂದು ಪ್ರಕರಣಕ್ಕೆ ತೆರೆಬಿದಿತ್ತು. ಈಗ ರಾಜ್ಯ ಸರ್ಕಾರ ಅದಕ್ಕೆ ಮರುಜೀವ ನೀಡಿರುವುದು ಒಳ್ಳೆಯ ಕೆಲಸ ಎಂದರು.

ಅದಿರು ರಫ್ತು ಪ್ರಕರಣದಲ್ಲಿ ಅಕ್ರಮ ನಡೆದಿರುವ ಬಗ್ಗೆ ನನಗೆ ಖಚಿತ ನಂಬಿಕೆಯಿದೆ. ಹೀಗಾಗಿ ತನಿಖೆ ನಡೆದು ಸತ್ಯಾಂಶ ಹೊರಬರಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕೆಂಬುದು ನಮ್ಮ ಆಗ್ರಹವಾಗಿದೆ ಎಂದು ಹೇಳಿದರು. ಎಸ್‍ಐಟಿ ತನಿಖಾ ಸಂಸ್ಥೆಗೆ ವಹಿಸಿದ ಕೂಡಲೇ ಕಾಂಗ್ರೆಸ್ ರಾಜಕೀಯ ಅಸ್ತವಾಗಿ ಬಳಸುತ್ತಿದೆ ಎಂಬುದಾಗಲಿ, ಸಿಬಿಐ ತನಿಖಾ ಸಂಸ್ಥೆಗೆ ವಹಿಸಿದ ಕೂಡಲೇ ಬಿಜೆಪಿ ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ ಎಂದು ಹೇಳುವುದು ಸರಿಯಲ್ಲ.  ರಾಜ್ಯದ ಸಾರ್ವಜನಿಕ ಹಿತಾಸಕ್ತಿಗೆ ಅನುಗುಣವಾಗಿ ಯಾವುದೇ ತನಿಖೆಗೆ ವಹಿಸಿದರೂ ಸ್ವಾಗತಾರ್ಹ. ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಮರುಜೀವ ದೊರೆತಿರುವಂತೆ ಅಕ್ರಮ ಅದಿರು ರಫ್ತ ಪ್ರಕರಣಕ್ಕೂ ಮರುಜೀವ ಬಂದಿರುವುದು ಸ್ವಾಗತಾರ್ಹವಾದುದು ಎಂದು ದತ್ತ ಹೇಳಿದರು.

Facebook Comments

Sri Raghav

Admin