ಕುಡಿದ ಅಮಲಿನಲ್ಲಿ ಅತ್ತೆಯನ್ನು ಕೊಂದ ಸೋದರಳಿಯ

ಈ ಸುದ್ದಿಯನ್ನು ಶೇರ್ ಮಾಡಿ

kolara

ಕೋಲಾರ,ನ.4- ಮದ್ಯದ ಅಮಲಿನಲ್ಲಿ ಸೋದರಳಿಯನ್ನೇ ಅತ್ತೆಯನ್ನು ಕಟ್ಟಿಗೆಯಿಂದ ಒಡೆದು ಕೊಲೆ ಮಾಡಿರುವ ಘಟನೆ ವೇಮಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನರಸಾಪುರ ಗ್ರಾಮದ ಅಂಬೇಡ್ಕರ್ ಕಾಲೋನಿಯ ಮುನಿಯಮ್ಮ(70) ಕೊಲೆಯಾದ ಅತ್ತೆ.
ಮನೆಯಲ್ಲಿ ಅತ್ತೆ ಮುನಿಯಮ್ಮ, ಅಳಿಯ ಮುನಿರಾಜು ಹಾಗೂ ಮುನಿಯಮ್ಮನ ಮಗಳು ವಾಸವಾಗಿದ್ದರು. ರಾತ್ರಿ ಮುನಿರಾಜು ಮದ್ಯ ಸೇವಿಸಿ ಮನೆಗೆ ಬಂದಿದ್ದಾನೆ. ಈ ವೇಳೆ ಮುನಿಯಮ್ಮ ಮತ್ತು ಅಳಿಯ ಮುನಿರಾಜು ನಡುವೆ ಕ್ಷುಲ್ಲಕ ವಿಚಾರಕ್ಕೆ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿ ಮುನಿರಾಜು ಅತ್ತೆಗೆ ಮರದ ಕಟ್ಟಿಗೆಯಿಂದ ತಲೆಗೆ ಬಲವಾಗಿ ಹೊಡೆದಿದ್ದಾನೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಮುನಿಯಮ್ಮನನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಸಬ್‍ಇನ್‍ಸ್ಪೆಕ್ಟರ್ ಲಕ್ಷ್ಮಿನಾರಾಯಣ ಭೇಟಿ ನೀಡಿ ಪರಿಶೀಲಿಸಿ ಸೋದರಳ್ಳಿಯ ಮುನಿರಾಜುನನ್ನು ಬಂಧಿಸಿದ್ದಾರೆ. ವೇಮಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments