ಕಿರಾಣಿ ಮತ್ತು ಬಳೆ ಅಂಗಡಿಗೆ ಬೆಂಕಿ ಬಿದ್ದು ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಭಸ್ಮ

ಈ ಸುದ್ದಿಯನ್ನು ಶೇರ್ ಮಾಡಿ

Foire--00-12

ಬಾಗಲಕೋಟೆ, ನ.5- ಕಿರಾಣಿ ಮತ್ತು ಬಳೆ ಅಂಗಡಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಹೋಗಿರುವ ಘಟನೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನಗರದ ವಲ್ಲಭಭಾಯಿ ವೃತ್ತದ ಬಳಿ ಇರುವ ಕಿರಾಣಿ ಮಾರ್ಕೆಟ್‍ನಲ್ಲಿ ಎಂಎಂ ಕೋಲಾಪುರ, ಜಾಫರ್ ಸಾಬ್, ಸಂತರಾಜ ಎಂಬುವರು ಕಿರಾಣಿ ಮತ್ತು ಒಳ ಅಂಗಡಿ ಇಟ್ಟುಕೊಂಡಿದ್ದರು. ಇಂದು ಬೆಳಗ್ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಹೋಗಿವೆ. ಸ್ಥಳಕ್ಕೆ ಅಗ್ನಿಶಾಮಕ ದಳದವರು ಭೇಟಿ ನೀಡಿ ಬೆಂಕಿ ನಂದಿಸಿದ್ದಾರೆ.

Facebook Comments

Sri Raghav

Admin