ಖಜಾನೆ ಲೂಟಿ ಹೊಡೆಯುವಲ್ಲಿ ಕಾಂಗ್ರೆಸ್ ಬ್ಯುಸಿ : ಯಡಿಯೂರಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

Yadiyurappa--------01

ತುಮಕೂರು, ನ.5- ಕಾಂಗ್ರೆಸ್ ಸರ್ಕಾರ ಖಜಾನೆ ಲೂಟಿ ಮಾಡುವಲ್ಲಿ ತೊಡಗಿದ್ದು, ಜನರ ಹಿತ ಕಾಯುವಲ್ಲಿ ವಿಫಲವಾಗಿದೆ ಎಂದು ಬಿ.ಎಸ್. ಯಡಿಯೂರಪ್ಪ ಆರೋಪಿಸಿದರು. ನಗರದ ಸಾರ್ವಜನಿಕ ಗ್ರಂಥಾಲಯ ಆವರಣದಲ್ಲಿ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ಪರಿವರ್ತನಾ ಯಾತ್ರೆಯ ಸಾರ್ವಜನಿಕ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ. ರಾಜ್ಯದ ಮುಖ್ಯಮಂತ್ರಿ ತಲೆ ತಿರುಕನಂತೆ ಬುರುಡೆ ದಾಸಯ್ಯನಂತೆ ಮಾತನಾಡುತ್ತಾ ತೊಘಲಕ್ ದರ್ಬಾರ್ ನಡೆಸುತ್ತಿದ್ದು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಈ ಸರ್ಕಾರ ಲೂಟಿ ಮಾಡಿರುವ ಹಗಲು ದರೋಡೆಯನ್ನು ತನಿಖೆ ನಡೆಸುವುದಾಗಿ ಘೋಷಿಸಿದರು.

ರಾಜ್ಯದಲ್ಲಿ ಕಳೆದ ನಾಲ್ಕು ವರ್ಷದಲ್ಲಿ ಕೊಲೆ, ಸುಲಿಗೆ, ಅತ್ಯಾಚಾರ, ಅನಾಚಾರ ಪ್ರಕರಣಗಳು ಹೆಚ್ಚಿವೆ ಸದನದಲ್ಲಿ ಮುಖ್ಯಮಂತ್ರಿಯೇ ಹೇಳುವಂತೆ 6521 ಕೊಲೆ ರಾಜ್ಯದಲ್ಲಿ ನಡೆದಿದೆ. ಅದರಲ್ಲಿ 2534 ಮಹಿಳೆಯರೇ ಕೊಲೆಯಾಗಿದ್ದಾರೆ. 3102 ಮಹಿಳೆ ಮಕ್ಕಳ ಮೇಲೆ ಅತ್ಯಾಚಾರ ನಡೆದಿದೆ, 1,24625 ಜನರ ಮೇಲೆ ಕ್ರಿಮಿನಲ್ ಮೊಕದಮೆ ಧಾಖಲಾಗಿದೆ ಇದನ್ನು ನೋಡಿದರೆ ಈ ಸರ್ಕಾರ ಕಾನೂನು ಸುವ್ಯವಸ್ಥೆ ಕುಸುದಿರುವುದು ಸಾಕ್ಷಿಯಾಗಿದೆ ಎಂದರು.
ಮಾಜಿ ಮುಖ್ಯಮಂತ್ರಿ ಜಗದೀಶ್ ಶಟ್ಟರ್ ಮಾತನಾಡಿ, ರಾಜ್ಯದಲ್ಲಿ ಬದಲಾವಣೆ ನಡೆಯುತ್ತಿದೆ ರಾಜ್ಯ ಸರ್ಕಾರದ ವೈಪಲ್ಯ ಮತ್ತು ಕೇಂದ್ರ ಸರ್ಕಾರದ ಜನೋಪಯೋಗಿ ಕಾರ್ಯಕ್ರಮಗಳನ್ನು ನೋಡಿ ಜನರು ಬಿಜೆಪಿಯತ್ತ ಬರುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ತುಮಕೂರು ಜಿಲ್ಲೆಯಲ್ಲಿ ನಡೆಯುತ್ತಿರುವ ಯಾತ್ರೆಗೆ ಅಭೂತಪೂರ್ವ ಜನ ಬೆಂಬಲ ದೊರೆತ್ತಿದೆ ಕಾಂಗ್ರೆಸ್ ಮನೆ ಮನೆ ಯಾತ್ರೆ ಮಾಡುತ್ತಿಲ್ಲಾ ರಾಜ್ಯದಲ್ಲಿ ಅಂತಿಮ ಯಾತ್ರೆ ಮಾಡುತ್ತಿದೆ ಎಂದು ಕುಟುಕಿದರು.

ಮಾಜಿ ಸಚಿವೆ ಸಂಸದೆ ಶೋಭಾಕರಂದ್ಲಾಜೆ, ಮಾಜಿ ಸಚಿವ ಶ್ರೀರಾಮುಲು, ಮುಖಂಡರಾದ ಕೆ.ಪಿ.ನಂಜುಂಡಿ, ಮಾಜಿ ಸಂಸದ ಜಿ.ಎಸ್.ಬಸವರಾಜು, ವಿ.ಸೋಮಣ್ಣ, ವೀರಯ್ಯ, ಡಾ.ಸಿ. ಸೋಮಶೇಖರ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಜಿ.ಬಿ.ಜ್ಯೋತಿಗಣೇಶ್, ನೆ.ಲ.ನರೇಂದ್ರಬಾಬು ಮತ್ತಿತರರು ಉಪಸ್ಥಿತರಿದ್ದರು.

Facebook Comments

Sri Raghav

Admin