ಇದೇ ಕೊನೆಯ ಟಿಪ್ಪು ಜಯಂತಿ : ಪ್ರತಾಪ್ ಸಿಂಹ

ಈ ಸುದ್ದಿಯನ್ನು ಶೇರ್ ಮಾಡಿ

prathap-simha
ಮೈಸೂರು,ನ.6-ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಆಚರಿಸುತ್ತಿರುವ ಈ ಟಿಪ್ಪು ಜಯಂತಿಯೇ ಕೊನೆಯದಾಗಲಿದೆ ಮತ್ತೆಂದೂ ಟಿಪ್ಪು ಜಯಂತಿ ಆಚರಿಸುವುದಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು. ಮೈಸೂರು-ಹುಣಸೂರು ರಸ್ತೆಯಲ್ಲಿರುವ ಕಲಾಮಂದಿರದ ಬಳಿ ಇಂದು ರಸ್ತೆ ನೇರಗೊಳಿಸುವ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಮುಂದಿನ ವರ್ಷ ಟಿಪ್ಪು ಜಯಂತಿ ಇಲ್ಲ. ಇದೇ ಕೊನೆ ಜಯಂತಿ. ಟಿಪ್ಪು ಮೈಸೂರಿಗಾಗಲಿ ಕರ್ನಾಟಕಕ್ಕಾಗಲಿ ಏನೂ ಮಾಡಿಲ್ಲ. ಮೈಸೂರು ಒಡೆಯರ ಕಾಣಿಕೆ ಅಪಾರವಾದದ್ದು. ಹಾಗಾಗಿ ನಾವು ಮುಂದಿನ ವರ್ಷದಿಂದ ಮೈಸೂರು ಒಡೆಯರ ಜಯಂತಿಯನ್ನು ಆಚರಿಸುತ್ತೇವೆ. ಒಂದೆರಡು ಕೋಟೆ ಕೊತ್ತಲ ಕಟ್ಟಿಸಿದ್ದು ಬಿಟ್ಟರೆ ಟಿಪ್ಪು ಸುಲ್ತಾನ್ ಯಾವ ಕೊಡುಗೆಯನ್ನೂ ಕೊಟ್ಟಿಲ್ಲ. ಏನೂ ಮಾಡಿಲ್ಲ. ಹಾಗಾಗಿ ಟಿಪ್ಪು ಜಯಂತಿ ಆಚರಿಸುವ ಅಗತ್ಯವಿಲ್ಲ ಎಂದು ಅವರು ಹೇಳಿದರು.

ನಮ್ಮ ಪರಿವರ್ತನಾ ರ‍್ಯಾಲಿ ಸಂಪೂರ್ಣ ಯಶಸ್ವಿಯಾಗುತ್ತಿದೆ. ಎಲ್ಲೂ ಫ್ಲಾಪ್ ಆಗಿಲ್ಲ. ನಮ್ಮಲ್ಲಿ ಭಿನ್ನಾಭಿಪ್ರಾಯವೂ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಈಗಾಗಲೇ ಯಡಿಯೂರಪ್ಪನವರೇ ಮುಖ್ಯಮಂತ್ರಿ ಎಂದು ಹೇಳಿದ್ದಾರೆ. ಅವರ ನೇತೃತ್ವದಲ್ಲಿ ಪ್ರಚಾರ ಮತ್ತು ರ‍್ಯಾಲಿ ನಡೆಯಲಿದೆ ಎಂದು ಅವರು ತಿಳಿಸಿದರು.

Facebook Comments

Sri Raghav

Admin