ಎಟಿಎಂನಲ್ಲಿ ಹರಿದ ನೋಟುಗಳು..!

ಈ ಸುದ್ದಿಯನ್ನು ಶೇರ್ ಮಾಡಿ

11-vij-2c-atm bundh

ಮೈಸೂರು,ನ.6-ಎಟಿಎಂನಲ್ಲಿ ಹಣ ತೆಗೆಯುವಾಗ ಗರಿ ಗರಿ ನೋಟು ಬರುತ್ತಿದೆ. ಆದರೆ ಕೆ.ಆರ್.ನಗರದ ಎಸ್‍ಬಿಐ ಬ್ಯಾಂಕ್‍ನ ಎಟಿಎಂನಿಂದ ಕಾನ್‍ಸ್ಟೇಬಲ್ ಒಬ್ಬರು ಹಣ ತೆಗೆದಾಗ ಎರಡು ಸಾವಿರ ಮುಖಬೆಲೆಯ ಹರಿದ ನೋಟುಗಳು ಬಂದಿದೆ. ಒಂದಲ್ಲ , ಎರಡಲ್ಲ 24 ಸಾವಿರ ರೂ. ಹರಿದ ನೋಟುಗಳು ಎಟಿಎಂನಿಂದ ಬಂದಿರುವುದು ಕಂಡು ಕಾನ್‍ಸ್ಟೇಬಲ್ ಕಂಗಾಲಾಗಿದ್ದಾರೆ.

ನಗರದ ದೇವರಾಜಠಾಣೆಯ ಕಾನ್‍ಸ್ಟೇಬಲ್ ಉಮೇಶ್ ಎಂಬುವರು ನಿನ್ನೆ 25 ಸಾವಿರ ರೂ. ತೆಗೆಯಲು ಕೆ.ಆರ್.ನಗರದ ಎಸ್‍ಬಿಐನ ಎಟಿಎಂನಿಂದ ಹಣ ತೆಗೆದಿದ್ದಾರೆ. ಈ ಪೈಕಿ ಎರಡು ಸಾವಿರ ಮುಖಬೆಲೆಯ 24 ಸಾವಿರ ರೂ. ನೋಟುಗಳು ಹರಿದಿವೆ ಮತ್ತು ಬಣ್ಣ ಮಾಸಿದೆ. ನಿನ್ನೆ ಭಾನುವಾರ. ಇಂದು ಕನಕ ಜಯಂತಿ ನಿಮಿತ್ತ ಬ್ಯಾಂಕ್‍ಗಳು ರಜೆ. ಈ ಹಿನ್ನೆಲೆಯಲ್ಲಿ ನಾಳೆ ಈ ಬಗ್ಗೆ ದೂರು ನೀಡುವುದಾಗಿ ಉಮೇಶ್ ತಿಳಿಸಿದ್ದಾರೆ.

Facebook Comments

Sri Raghav

Admin