ಬಾಲಕರಿಬ್ಬರನ್ನು ಹಿಂಸಿಸಿ, ಪರಸ್ಪರ ಸಲಿಂಗ ಸೆಕ್ಸ್ ಮಾಡಿಸಿ ವಿಡಿಯೋ ಮಾಡಿದ ದುಷ್ಕರ್ಮಿಗಳು..!

ಈ ಸುದ್ದಿಯನ್ನು ಶೇರ್ ಮಾಡಿ

Boy-Sex--01

ನವದೆಹಲಿ, ನ.6-ಬೆಚ್ಚಿಬೀಳುವಂಥ ಕೃತ್ಯವೊಂದು ರಾಜಧಾನಿ ದೆಹಲಿಯಲ್ಲಿ ಮರುಕಳಿಸಿದೆ. 10 ಜನ ದುಷ್ಕರ್ಮಿಗಳ ಗುಂಪೊಂದು ಇಬ್ಬರು ಬಾಲಕರನ್ನು ಥಳಿಸಿ, ಚಿತ್ರಹಿಂಸೆ ನೀಡಿ ಪರಸ್ಪರ ಲೈಂಗಿಕ ಕ್ರಿಯೆ ನಡೆಸಲು ಬೆದರಿಕೆವೊಡ್ಡಿ, ಸಲಿಂಗ ಕಾಮದ ದೃಶ್ಯವನ್ನು ಸೆರೆ ಹಿಡಿದು ವೈರಲ್ ಮಾಡಿದ್ದಾರೆ. ಈ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪಶ್ಚಿಮ ದೆಹಲಿಯ ರೋಹಿಣಿ ಪ್ರದೇಶದಲ್ಲಿ ಅ.26ರಂದು ಈ ಘಟನೆ ನಡೆದಿದ್ದು, ಬಾಲಕರ ಕುಟುಂಬದವರು ಪೊಲೀಸರಿಗೆ ದೂರು ನೀಡಿದ ನಂತರ ನಿನ್ನೆ ದುಷ್ಕರ್ಮಿಗಳ ಕೃತ್ಯ ಬೆಳಕಿಗೆ ಬಂದಿತು.

ಹೊಳಂಬಿ ಕಲಾನ್‍ನಲ್ಲಿರುವ ಮೆಟ್ರೋ ವಿಹಾರ್‍ನ ಪ್ರದೇಶದ ನಿವಾಸಿಗಳಾದ 13 ಮತ್ತು 15 ವರ್ಷದ ಬಾಲಕರನ್ನು ಕನ್ವರ್ ಸಿಂಗ್ ಮತ್ತು ಆತನ ಸಹಚರರು ಚಿತ್ರಹಿಂಸೆಗೆ ಗುರಿಪಡಿಸಿ ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಬೆದರಿಕೆ ಮೂಲಕ ಪ್ರಚೋದನೆ ನೀಡಿದ್ದಾರೆ ಎಂದು ದೆಹಲಿ ವಿಶೇಷ ಪೊಲೀಸ್ ಕಮಿಷನರ್ ದೀಪೇಂದ್ರ ಪಾಠಕ್ ತಿಳಿಸಿದ್ದಾರೆ.

ತನ್ನ ಮನೆಯಲ್ಲಿ ನಡೆದ ಕಳ್ಳತನಕ್ಕೆ ಈ ಬಾಲಕರೇ ಕಾರಣ ಎಂಬ ಸಂಶಯದ ಮೇಲೆ ಕನ್ವರ್ ಸಿಂಗ್ ಅಪ್ರಾಪ್ತರನ್ನು ಕರೆಸಿಕೊಂಡು ಒತ್ತೆಯಾಳಾಗಿರಿಸಿದ. ನಂತರ ಅವರಿಬ್ಬರಿಗೂ ಚರ್ಮದ ಬೆಲ್ಟ್‍ನಿಂದ ಬಾಸುಂಡೆ ಬರುವ ತನಕ ಥಳಿಸಿದ. ತಾವು ಯಾವುದೇ ತಪ್ಪು ಮಾಡಿಲ್ಲವೆಂದು ಬಾಲಕರು ಹೇಳಿದರೂ ಕೇಳದೆ ತನ್ನ ಸ್ನೇಹಿತರನ್ನು ಕರೆಸಿಕೊಂದು ಬಾಲಕರನ್ನು ನಗ್ನಗೊಳಿಸಿ ಚಿತ್ರಹಿಂಸೆ ನೀಡಿದ. ಅಲ್ಲದೇ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸುವಂತೆಯೂ ಬಲವಂತಪಡಿಸಿ, ಆ ದೃಶ್ಯಗಳನ್ನು ಮೊಬೈಲ್‍ನಲ್ಲಿ ಸೆರೆ ಹಿಡಿದ. ಅಲ್ಲದೇ ಈ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ.
ಅಲ್ಲದೇ ಬಾಲಕರ ಗುಪ್ತ ಸ್ಥಳಕ್ಕೆ ಮೆಣಸಿನಕಾಯಿ ಪುಡಿ ಎರಚಿ ಸಿಗರೇಟ್‍ಗಳಿಂದ ಸುಟ್ಟಿದ್ದಾರೆ. ತೀವ್ರ ಗಾಯಗೊಂಡಿರುವ ಬಾಲಕರನ್ನು ರೋಹಿಣಿ ಪ್ರದೇಶದ ಅಂಬೇಡ್ಕರ್ ಆಸ್ಪತ್ರೆಗೆ ದಾಖಲಿಸಲಾಗಿದೆ.  ಪೋಷಕರ ದೂರಿನ ಮೇರೆ ಇಬ್ಬರನ್ನು ಬಂಧಿಸಲಾಗಿದ್ದು, ನಾಪತ್ತೆಯಾಗಿರುವವರಿಗೆ ಶೋಧ ಮುಂದುವರಿದಿದೆ.

Facebook Comments

Sri Raghav

Admin