ಬಿಎಸ್‍ಎಫ್ ಕ್ಯಾಂಪ್ ಮೇಲೆ ದಾಳಿ ನಡೆಸಿದ್ದು ನಾವೇ : ಜೆಇಎಂ ಮುಖ್ಯಸ್ಥ ಮಸೂದ್ ಅಜರ್‍

ಈ ಸುದ್ದಿಯನ್ನು ಶೇರ್ ಮಾಡಿ

Masood-azher

ನವದೆಹಲಿ, ನ.6-ಪಾಕಿಸ್ತಾನದ ನಿಷೇಧಿತ ಉಗ್ರಗಾಮಿ ಸಂಘಟನೆ ಜೈಷ್-ಎ-ಮಹಮದ್ (ಜೆಇಎಂ) ಮುಖ್ಯಸ್ಥ ಮಸೂದ್ ಅಜರ್‍ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸುವಂತೆ ವಿಶ್ವಸಂಸ್ಥೆಯಲ್ಲಿ ಭಾರತ ಪ್ರಯತ್ನ ಮುಂದುವರಿಸಿರುವಾಗಲೇ ಪಠಾಣ್‍ಕೋಟ್ ದಾಳಿ ಸೂತ್ರಧಾರ ಮತ್ತೆ ಭಾರೀ ವಿಧ್ವಂಸಕ ಕೃತ್ಯ ನಡೆಸುವುದಾಗಿ ಎಚ್ಚರಿಕೆ ನೀಡಿದ್ಧಾನೆ. ಈತ ಆಡಿಯೋ ಕ್ಲಿಪ್ (ಧ್ವನಿ ಮುದ್ರಿಕೆ) ಝಿ ಮೀಡಿಯಾಗೆ ಲಭಿಸಿದ್ದು, ಅಕ್ಟೋಬರ್ 3ರಂದು ಶ್ರೀನಗರ ಬಿಎಸ್‍ಎಫ್ ಶಿಬಿರದ ಮೇಲೆ ಜೆಇಎಂ ಉಗ್ರರು ದಾಳಿ ನಡೆಸಿರುವುದನ್ನು ಒಪ್ಪಿಕೊಂಡಿದ್ದಾನೆ.

ಇಡೀ ವಿಶ್ವವೇ ನಮ್ಮ ಧರ್ಮಯುದ್ಧವನ್ನು ಕೊನೆಗೊಳಿಸುವುದಾಗಿ ಹೇಳುತ್ತಿದ್ದಾಗಲೇ ನಮ್ಮ ಮಂದಿ ಶ್ರೀನಗರದ ಬಿಎಸ್‍ಎಫ್ ಶಿಬಿರದ ಮೇಲೆ ದಾಳಿ ನಡೆಸಿದ್ದಾರೆ ಎಂದು ಅಜರ್ ಒಂದು ಗಂಟೆ 45 ನಿಮಿಷಗಳ ಆಡಿಯೋದಲ್ಲಿ ತಿಳಿಸಿದ್ದಾನೆ.  ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಕೆಂಡ ಕಾರಿರುವ ಜೆಇಎಂ ಮುಖ್ಯಸ್ಥ, ಈ ಇಬ್ಬರು ನಾಯಕರು ಇಸ್ಲಾಂ ಧರ್ಮ ಯುದ್ಧದ ದ್ವೇಷಿಗಳು ಇವರು ಏನೇ ಮಾಡಿದರೂ ನಮ್ಮನ್ನು ಕೊಲ್ಲಲು ಸಾಧ್ಯವಿಲ್ಲ ಎಂದು ಹೇಳಿದ್ದಾನೆ.

ಪಾಕಿಸ್ತಾನ ಸರ್ಕಾರದ ನಮ್ಮ ಸಚಿವರು ವಿದೇಶಕ್ಕೆ ಹೋದಾಗ ಅಂತಾರಾಷ್ಟ್ರೀಯ ಸಮುದಾಯದ ಕೆಲವು ನಾಯಕರು ನೆರವಿನ ಆಮಿಷವೊಡ್ಡಿ ನಮ್ಮನ್ನು ಕೊಲ್ಲಲು ತಿಳಿಸುತ್ತಿದ್ದಾರೆ. ಆದರೆ ಅಲ್ಲಾನ ಕೃಪೆಯಿಂದ ನಾವೆಲ್ಲ ಜೀವಂತವಾಗಿದ್ದೇನೆ ಎಂದು ಅಜರ್ ತಿಳಿಸಿದ್ದಾನೆ.

Facebook Comments

Sri Raghav

Admin