ಭೀಕರ ಕಾರು ಅಪಘಾತದಲ್ಲಿ ಆರು ಮಂದಿ ಸುಟ್ಟು ಕರಕಲು

ಈ ಸುದ್ದಿಯನ್ನು ಶೇರ್ ಮಾಡಿ

Car-Acci--02

ಆಗ್ರಾ, ನ.6-ಅತಿ ವೇಗವಾಗಿ ಬರುತ್ತಿದ್ದ ಕಾರೊಂದು ರಸ್ತೆ ವಿಭಜಕ್ಕೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡ ಪರಿಣಾಮ ಒಂದೇ ಕುಟುಂಬದ ನಾಲ್ವರು ಸೇರಿದಂತೆ ಆರು ಮಂದಿ ಸುಟ್ಟು ಕರಕಲಾದ ಘಟನೆ ಆಗ್ರಾ-ಲಕ್ನೋ ಎಕ್ಸ್‍ಪ್ರೆಸ್ ವೇನಲ್ಲಿ ಇಂದು ಮುಂಜಾನೆ ಸಂಭವಿಸಿದೆ. ಈ ದುರಂತದಲ್ಲಿ ಗಾಯಗೊಂಡಿರುವ ಮತ್ತೊಬ್ಬ ಪ್ರಯಾಣಿಕನ ಸ್ಥಿತಿ ಚಿಂತಾಜನಕವಾಗಿದೆ.

ದೆಹಲಿಯ ಬದರ್‍ಪುರ್ ಪ್ರದೇಶದ ದಂಪತಿ, ಇಬ್ಬರು ಮಕ್ಕಳು ಹಾಗೂ ಕುಟುಂಬದ ಇಬ್ಬರು ಸ್ನೇಹಿತರು ಈ ಭೀಕರ ಅಪಘಾತದಲ್ಲಿ ಜೀವಂತ ದಹನಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.  ಆಗ್ರಾ-ಲಕ್ನೋ ಇ-ವೇನಲ್ಲಿ ಸೌರಿಖ್ ಪೊಲೀಸ್ ಠಾಣೆ ವ್ಯಾಪ್ತಿಯ ಕನ್ನೌಜ್ ತಾಲ್ಲೂಕಿನ ಹುಶೇಪುರ್ ಗ್ರಾಮದ ಬಳಿ ಇಂದು ನಸುಕಿನಲ್ಲಿ ಈ ಅಪಘಾತ ಸಂಭವಿಸಿದೆ. ಅತಿ ವೇಗವಾಗಿ ಚಲಿಸುತ್ತಿದ್ದ ಕಾರು ರೋಡ್ ಡಿವೈಡರ್‍ಗೆ ಡಿಕ್ಕಿಯಾಗಿ ನಂತರ ಉರುಳಿ ಬಿದ್ದು, ಇದರಿಂದ ಬೆಂಕಿ ಹೊತ್ತಿಕೊಂಡಿದೆ. ಈ ಕುಟುಂಬ ದಹೆಲಿಯ ಸಾಕೇತ್ ಮಾಲ್‍ನಲ್ಲಿ ಕೃತಕ ಆಭರಣ ಮಳಿಗೆ ಹೊಂದಿದೆ. ಸ್ನೇಹಿತರಿಬ್ಬರು ಕಾಫಿ ಶಾಪ್ ನಡೆಸುತ್ತಿದ್ದರು.

Facebook Comments

Sri Raghav

Admin