ಯೋಧನಿಗಾಗಿ ಮಧ್ಯರಾತ್ರಿ 1 ಗಂಟೆಗೆ ಆಸ್ಪತ್ರೆಗೆ ಬಂದ ಸಚಿವ ಖಾದರ್

ಈ ಸುದ್ದಿಯನ್ನು ಶೇರ್ ಮಾಡಿ

Khadar--02

ಮಂಗಳೂರು,ನ.6- ಯೋಧಯೊಬ್ಬರಿಗೆ ವಿಷಕಾರಿ ಹಾವು ಕಚ್ಚಿ ಜೀವನ್ಮರಣ ಹೋರಾಟದ ಸುದ್ದಿ ತಿಳಿದ ಸಚಿವ ಯು.ಟಿ.ಖಾದರ್ ನಡುರಾತ್ರಿ ಆಸ್ಪತ್ರೆಗೆ ದೌಡಾಯಿಸಿ ವೈದ್ಯರಿಂದ ಮಾಹಿತಿ ಪಡೆದರು.  ಮಂಗಳೂರು ಹೊರವಲಯದ ಮುಡಿಪು ಗ್ರಾಮದ ನಿವಾಸಿ ಯೋಧ ಸಂತೋಷ್ ಕುಮಾರ್ ಎಂಬುವರಿಗೆ ಹಾವು ಕಚ್ಚಿ ನಗರದ ಫಾದರ್ ಮುಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಚಿಕಿತ್ಸೆ ನೀಡುತ್ತೇವೆ, ಭರವಸೆ ನೀಡುವುದಿಲ್ಲ ಎಂಬ ವೈದ್ಯರ ಮಾತಿನಿಂದ ಗಾಬರಿಗೊಂಡ ಪೋಷಕರು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಯು.ಟಿ.ಖಾದರ್ ಅವರಿಗೆ ಕರೆ ಮಾಡಿದ್ದರು ಎನ್ನಲಾಗಿದೆ. ಈ ಮಾಹಿತಿ ತಿಳಿದ ಸಚಿವರು, ಮಧ್ಯರಾತ್ರಿ 1 ಗಂಟೆ ಸುಮಾರಿನಲ್ಲಿ ಆಸ್ಪತ್ರೆಗೆ ಧಾವಿಸಿ ಆರೋಗ್ಯ ವಿಚಾರಿಸಿದರು. ಸದ್ಯ ಯೋಧ ಸಂತೋಷ್‍ಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ.

Facebook Comments

Sri Raghav

Admin