ವಿಯೆಟ್ನಾಂ ಚಂಡಮಾರುತ ಚಂಡಮಾರುತಕ್ಕೆ 30ಕ್ಕೂ ಹೆಚ್ಚು ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Vietnam-01

ಹನೋಯಿ, ನ.6-ವಿಯೆಟ್ನಾಂನ ದಕ್ಷಿಣ-ಮಧ್ಯ ಕರಾವಳಿ ಪ್ರಾಂತ್ಯಕ್ಕೆ ಅಪ್ಪಳಿಸಿದ ಚಂಡಮಾರುತಕ್ಕೆ 30ಕ್ಕೂ ಹೆಚ್ಚು ಮಂದಿ ಬಲಿಯಾಗಿ, 22 ಜನ ನಾಪತ್ತೆಯಾಗಿದ್ದಾರೆ. ವಿಯೆಟ್ನಾಂನ ಬಿನ್‍ಡಿನ್ ಪ್ರಾಂತ್ಯದ ಕಡಲತೀರದ ಬಳಿ ಮುಳುಗಡೆಯಾಗಿರುವ ಸರಕು ನೌಕೆಯಲ್ಲಿದ್ದ 17 ಮಂದಿ ಸಿಬ್ಬಂದಿ ಕಣ್ಮರೆಯಾದವರಲ್ಲಿ ಸೇರಿದ್ದಾರೆ ಈ ನೌಕೆಯಲ್ಲಿದ್ದ 74 ಮಂದಿಯನ್ನು ರಕ್ಷಿಸಲಾಗಿದೆ ಎಂದು ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.

ಭಾರೀ ಚಂಡಮಾರುತ ಮತ್ತು ಧಾರಾಕಾರ ಮಳೆಯಿಂದ 600ಕ್ಕೂ ಹೆಚ್ಚು ಮನೆಗಳು ಸಂಪೂರ್ಣ ನಾಶವಾಗಿವೆ. 40,000ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿವೆ. 228 ದೋಣಿಗಳು ಮುಳುಗಡೆಯಾಗಿವೆ  ಪ್ರಕೃತಿ ವಿಕೋಪದಿಂದಾಗಿ ಅಪಾರ ಪ್ರಮಾಣದ ಬೆಳೆಗಳು ನಷ್ಟವಾಗಿವೆ. ವಾಹನಗಳು ಮತ್ತು ರೈಲು ಸಂಚಾರ ಸಂಪೂರ್ಣ ನಿಲುಗಡೆಯಾಗಿದೆ. ಮಂಗಳವಾರದವರೆಗೂ ಭಾರೀ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

Facebook Comments

Sri Raghav

Admin