ಸರಗಳ್ಳರನ್ನು ಮಟ್ಟ ಹಾಕುವಂತೆ ಪೊಲೀಸ್ ಆಯುಕ್ತ ಸುನೀಲ್‍ಕುಮಾರ್ ಖಡಕ್ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

Suneel-Kumar

ಬೆಂಗಳೂರು, ನ.6- ನಗರದಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ಕಡೆ ಸರ ಅಪಹರಣ ನಡೆಯುತ್ತಲೇ ಇದ್ದು, ಆದಷ್ಟು ಬೇಗ ಸರಗಳ್ಳರನ್ನು ಬಂಧಿಸುವಂತೆ ನಗರ ಪೊಲೀಸ್ ಆಯುಕ್ತ ಸುನೀಲ್‍ಕುಮಾರ್ ಎಲ್ಲಾ ಪೊಲೀಸ್ ಠಾಣೆಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಸರಗಳ್ಳತನ ತಡೆಯಲು ಎಲ್ಲಾ ಕಡೆ ಗಸ್ತು ಹೆಚ್ಚಿಸುವಂತೆ  ಆಯುಕ್ತರು ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.  ನಗರದಲ್ಲಿ ನಾಕಾಬಂದಿ ಮಾಡಿ ಬೈಕ್‍ಗಳ ತಪಾಸಣೆ ನಡೆಸುವಂತೆ ಅವರು ಸೂಚನೆ ನೀಡಿದ್ದು, ಈಗಾಗಲೇ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ. ನಗರದಲ್ಲಿ ಕಳೆದ 10 ದಿನದಲ್ಲಿ ವಿವಿಧ ಠಾಣೆಗಳಲ್ಲಿ 38 ಸರಗಳ್ಳತನ ಪ್ರಕರಣ ದಾಖಲಾಗಿರುವ ಬಗ್ಗೆ ಪ್ರತಿಕ್ರಿಯಿಸಿರುವ ಆಯುಕ್ತ ಸುನೀಲ್‍ಕುಮಾರ್, ಕಪ್ಪುಬಣ್ಣದ ಪಲ್ಸರ್ ಬೈಕ್‍ಗಳಲ್ಲಿ ಸರಗಳ್ಳರು ಹೆಲ್ಮೆಟ್ ಧರಿಸಿಕೊಂಡು ಬಂದು ಸರ ಅಪಹರಿಸುತ್ತಿರುವುದು ವಿವಿಧ ಕಡೆಯ 20 ಸಿಸಿಟಿವಿಗಳಲ್ಲಿ ಸೆರೆಯಾಗಿದೆ.

ಒಂದೇ ಗ್ಯಾಂಗ್‍ನಿಂದ ಈ ಕೃತ್ಯ ನಡೆಸುತ್ತಿರುವ ಶಂಕೆ ವ್ಯಕ್ತವಾಗಿದ್ದು, ಸರಗಳ್ಳರು ವೃದ್ಧೆಯರನ್ನೇ ಟಾರ್ಗೆಟ್ ಮಾಡಿಕೊಂಡು ಸರ ಅಪಹರಿಸುತ್ತಿದ್ದು, ಕೂಡಲೇ ಆಯಾ ಠಾಣಾ ವ್ಯಾಪ್ತಿಗಳಲ್ಲಿ ಗಸ್ತು ಹೆಚ್ಚಿಸಿ ಸರಗಳ್ಳರನ್ನು ಬಂಧಿಸುವಂತೆ ಪೊಲೀಸ್ ಸಿಬ್ಬಂದಿಗಳಿಗೆ ಸೂಚನೆ ನೀಡಿದ್ದಾರೆ. ಬೆಳ್ಳಂಬೆಳಗ್ಗೆ ವಾಯುವಿಹಾರಕ್ಕೆ ತೆರಳುವವರು, ಹಾಲು ತರಲು, ಕೆಲಸಕ್ಕೆ ತೆರಳುವ ಮಹಿಳೆಯರ ಗಮನ ಸೆಳೆದು ಸರ ಅಪಹರಿಸುತ್ತಿರುವುದು ಕಂಡು ಬಂದಿದೆ. ಅಲ್ಲದೆ ರಾತ್ರಿ ವೇಳೆ ಒಂಟಿಯಾಗಿ ಹೋಗುವ ಮಹಿಳೆಯರ ಸರಗಳನ್ನು ಅಪಹರಿಸುತ್ತಿರುವ ಸರಗಳ್ಳರನ್ನು ಕೂಡಲೇ ಬಂಧಿಸುವಂತೆ ಆಯುಕ್ತರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಈಗಾಗಲೇ ಕೆಲವು ಕಡೆ ನಾಕಾಬಂದಿ ಹಾಕಿ ಬೈಕ್‍ಗಳ ತಪಾಸಣೆ ಹಾಗೂ ಸರಗಳ್ಳರ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದಾರೆ.

Facebook Comments

Sri Raghav

Admin