ಅಣ್ವಸ್ತ್ರ ಸಿಡಿತಲೆ ಹೊತ್ತೊಯ್ಯಬಲ್ಲ ದೇಶೀ ನಿರ್ಮಿತ ನಿರ್ಭಯ್ ಕ್ಷಿಪಣಿ ಪ್ರಯೋಗ ಯಶಸ್ವಿ

ಈ ಸುದ್ದಿಯನ್ನು ಶೇರ್ ಮಾಡಿ

nirbhay
ಬಾಲಸೋರ್ (ಒಡಿಶಾ), ನ.7-ದೇಶೀಯವಾಗಿ ನಿರ್ಮಿತವಾದ 300 ಕೆಜಿ ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ ದೀರ್ಘ ಅಂತರದ ಸಬ್-ಸೋನಿಕ್ ನಿರ್ಭಯ್ ಕ್ಷಿಪಣಿಯನ್ನು ಭಾರತ ಇಂದು ಯಶ್ವಸಿಯಾಗಿ ಪ್ರಯೋಗಿಸಿದೆ. ಒಡಿಶಾ ಕರಾವಳಿಯ ಚಾಂಡಿಪುರ್ ಪರೀಕ್ಷಾ ವಲಯದಲ್ಲಿ ಇಂದು ನಡೆದ ಪ್ರಯೋಗ ಅತ್ಯಂತ ಸಫಲವಾಗಿದ ಎಂದು ರಕ್ಷಣಾ ವಿಜ್ಞಾನಿಗಳು ತಿಳಿಸಿದ್ದಾರೆ. ದೇಶೀಯ ನಿರ್ಮಿತ ಕ್ಷಿಪಣಿ ವ್ಯವಸ್ಥೆಯ ಐದನೇ ಪ್ರಾಯೋಗಿಕ ಪ್ರಯೋಗ ಇದಾಗಿದೆ.

Facebook Comments