ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (07-11-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಮನುಷ್ಯನು ಹಿಂದೆ ಮಾಡಿದ ಕರ್ಮ ಅವನು ಮಲಗಿದ್ದಾಗ ತಾನೂ ಮಲಗಿರು ತ್ತದೆ. ಎದ್ದು ನಿಂತವನನ್ನು ಅನುಸರಿಸಿ ನಿಲ್ಲುತ್ತದೆ; ಓಡುವವನ ಬೆನ್ನಟ್ಟಿ ಓಡುತ್ತದೆ. -ಸುಭಾಷಿತಸುಧಾನಿಧಿ

Rashi

ಪಂಚಾಂಗ : ಮಂಗಳವಾರ, 07.11.2017

ಸೂರ್ಯ ಉದಯ ಬೆ.06.15 / ಸೂರ್ಯ ಅಸ್ತ ಸಂ.05.51
ಚಂದ್ರ ಅಸ್ತ ಬೆ.09.13 / ಚಂದ್ರ ಉದಯ ರಾ.09.06
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ಕಾರ್ತಿಕ ಮಾಸ
ಕೃಷ್ಣ ಪಕ್ಷ / ತಿಥಿ : ಚತುರ್ಥಿ (ರಾ.09.52)
ನಕ್ಷತ್ರ: ಮೃಗಶಿರಾ (ಸಾ.05.30) / ಯೋಗ: ಶಿವ (ಮ.03.43)
ಕರಣ: ಭವ-ಬಾಲವ (ಬೆ.11.23-ರಾ.09.52)
ಮಳೆ ನಕ್ಷತ್ರ: ವಿಶಾಖ / ಮಾಸ: ತುಲಾ / ತೇದಿ: 22

ರಾಶಿ ಭವಿಷ್ಯ :

ಮೇಷ : ಸ್ನೇಹಿತರು, ಕುಟುಂಬ ವರ್ಗದವರ ಸಹಾಯ ದೊರೆಯದೆ, ಶತ್ರುಗಳು ಮಿತ್ರರಾಗುವರು
ವೃಷಭ : ಮಾನಸಿಕ ಅಶಾಂತಿ ಅಧಿಕವಾಗಿ ಕಾಡುತ್ತದೆ
ಮಿಥುನ: ಉದ್ಯೋಗದಲ್ಲಿ ಮೇಲಧಿಕಾರಿಗಳಿಂದ ಕಿರುಕುಳ
ಕಟಕ : ಕುಟುಂಬ ಕಲಹಗಳು ಕಡಿಮೆಯಾಗುತ್ತವೆ
ಸಿಂಹ: ಹಿರಿಯರ ಅನಾರೋಗ್ಯ ದಿಂದ ಆಸ್ಪತ್ರೆಗೆ ಅಧಿಕ ಹಣ ಖರ್ಚಾಗುತ್ತದೆ
ಕನ್ಯಾ: ಅತಿಥಿಗಳ ಆಗಮನ ದಿಂದ ಕುಟುಂಬದ ಸದಸ್ಯರಿಗೆ ಸಂತೋಷವಾಗುತ್ತದೆ
ತುಲಾ: ಸಂಗಾತಿಯೊಂದಿಗೆ ಸಾಮರಸ್ಯ ಕಂಡುಬರುತ್ತದೆ
ವೃಶ್ಚಿಕ: ದುರ್ಜನರ ಸಹವಾಸ ಮಾಡುವಿರಿ, ಅನಾವಶ್ಯಕ ಕಲಹಗಳು ಉಂಟಾಗುತ್ತವೆ
ಧನುಸ್ಸು: ವಾಹನವನ್ನು ಎಚ್ಚರಿಕೆ ಯಿಂದ ಚಲಾಯಿಸಿರಿ, ಅಪಘಾತವಾಗುವ ಸಾಧ್ಯತೆಗಳಿವೆ
ಮಕರ: ನಿಮ್ಮ ಒಳ್ಳೆಯತನ ದುರ್ಬಳಕೆಯಾಗುತ್ತದೆ
ಕುಂಭ: ಯಾರನ್ನೂ ನಂಬಿ ಸಾಲಕ್ಕೆ ಸಾಕ್ಷಿ ಹಾಕದಿರು ವುದೇ ಉತ್ತಮ, ಹಿತಶತ್ರುಗಳ ಕಾಟ ಜಾಸ್ತಿಯಾಗುತ್ತದೆ
ಮೀನ: ಮದುವೆ-ಮುಂಜಿ, ಗೃಹ ಪ್ರವೇಶ ಮುಂತಾದ ಶುಭ ಕಾರ್ಯಗಳು ನೆರವೇರುತ್ತವೆ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download   Android / iOS  

Facebook Comments

Sri Raghav

Admin