ಎನ್‍ಟಿಪಿಸಿ ಬಾಯ್ಲರ್ ದುರಂತೆ : ಮತ್ತೆ ಮೂವರ ಸಾವು, ಮೃತರ ಸಂಖ್ಯೆ 37ಕ್ಕೇರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Blast--01

ನವದೆಹಲಿ, ನ.7-ಉತ್ತರಪ್ರದೇಶದ ರಾಯ್‍ಬರೇಲಿಯ ರಾಷ್ಟ್ರೀಯ ಶಾಖೋತ್ಪನ್ನ ವಿದ್ಯುತ್ ನಿಗಮ (ಎನ್‍ಟಿಪಿಸಿ) ಘಟಕದಲ್ಲಿ ಸಂಭವಿಸಿದ ಭಾರೀ ಸ್ಫೋಟದಿಂದಾಗಿ ತೀವ್ರ ಸುಟ್ಟಗಾಯಗಳಿಂದ ದೆಹಲಿಯ ವಿವಿಧ ಆಸ್ಪತ್ರೆಗಳಲ್ಲಿ ಹೆಚ್ಚುವರಿ ಚಿಕಿತ್ಸೆಗಾಗಿ ದಾಖಲಾಗಿದ್ದ 18 ಮಂದಿಯಲ್ಲಿ ಮೂವರು ಮೃತಪಟ್ಟಿದ್ದಾರೆ. ಇದರೊಂದಿಗೆ ಈ ದುರಂತದಲ್ಲಿ ಸತ್ತವರ ಸಂಖ್ಯೆ 37ಕ್ಕೇರಿದೆ. ತೀವ್ರ ಸುಟ್ಟಗಾಯಗಳಾಗಿದ್ದ ಸಂತೋಷ್ ಕುಮಾರ್ (40), ಚಂದರ್ ಪ್ರತಾಪ್(22) ಮತ್ತು ನಾಗೇಶ್ವರ್ (35) ಈ ನತದೃಷ್ಟರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ರಾಯ್‍ಬರೇಲಿಯ ಉಂಚಾಹಾರ್ ಎನ್‍ಟಿಪಿಸಿ ಘಟಕದಲ್ಲಿ ಬಾಯ್ಲರ್ ಸ್ಫೋಟ ದುರ್ಘಟನೆಯಲ್ಲಿ ಈವರೆಗೆ 37 ಜನ ಬಲಿಯಾಗಿದ್ದಾರೆ. ತೀವ್ರಗಾಯಗೊಂಡಿದ್ದ 18 ಮಂದಿಯನ್ನು ಹೆಚ್ಚುವರಿ ಚಿಕಿತ್ಸೆಗಾಗಿ ದೆಹಲಿಗೆ ಸ್ಥಳಾಂತರಿಸಲಾಗಿತ್ತು. 10 ಮಂದಿ ಸಫ್ಧರ್‍ಜಂಗ್ ಆಸ್ಪತ್ರೆಯಲ್ಲಿ ಮತ್ತು 8 ಜನರು ಎಐಐಎಂಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

Facebook Comments

Sri Raghav

Admin