ಕರ್ನಾಟಕದಲ್ಲಿ ಸದ್ಯದಲ್ಲೇ ಚುನಾವಣೆ ನಡೆದರೆ ಭಾರಿ ಜಯಭೇರಿ ಬಾರಿಸಲಿದೆ ಬಿಜೆಪಿ : ಸಮೀಕ್ಷೆ

ಈ ಸುದ್ದಿಯನ್ನು ಶೇರ್ ಮಾಡಿ

BJP-Rath-Yatra--01

ಬೆಂಗಳೂರು, ನ.7- ಕರ್ನಾಟಕದಲ್ಲಿ ಈ ಸಂದರ್ಭದಲ್ಲಿ ವಿಧಾನಸಭೆ ಚುನಾವಣೆ ನಡೆದರೆ ಬಿಜೆಪಿಗೆ ಭರ್ಜರಿ ಜಯ ಲಭಿಸಲಿದೆ ಎಂದು ಸಮೀಕ್ಷೆಯೊಂದು ವರದಿ ನೀಡಿದೆ. ಕಳೆದ ಎರಡು ತಿಂಗಳ ಹಿಂದೆ ಸಿ ಫೋರ್ ಕರ್ನಾಟಕದ ವಿವಿಧ ಕ್ಷೇತ್ರಗಳಲ್ಲಿ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯಂತೆ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದಿತ್ತು. ಕಾಪ್ಸ್ ಸಂಸ್ಥೆ ಈ ಹಿಂದೆ ಪ್ರಕಟಿಸಿದ ವರದಿಯಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ವರದಿ ಬಂದಿತ್ತು. ಈಗ ಮತ್ತೊಮ್ಮೆ ಸರ್ವೆ ಮಾಡಿ ಚುನಾವಣೆ ನಡೆದರೆ ಯಾವ ಪಕ್ಷಕ್ಕೆ ಬಹುಮತ ಸಿಗಲಿದೆ? ಎಂಬ ಪ್ರಶ್ನೆ ಹೊತ್ತು ಕಾಪ್ಸ್ ಸಂಸ್ಥೆ ವರದಿ ಪ್ರಕಟಿಸಿದೆ. 113 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಲಿರುವ ಕಮಲ ಪಕ್ಷ ಮತ್ತೊಮ್ಮೆ ಅಧಿಕಾರ ಪೀಠಕ್ಕೇರುವ ಕನಸು ಕಾಣಬಹುದು ಎಂದು ಸಮೀಕ್ಷೆ ಹೇಳಿದೆ. ಕ್ರಿಯೇಟೀವ್ ಸೆಂಟರ್ ಫಾರ್ ಪೊಲಿಟಿಕಲ್ ಆ್ಯಂಡ್ ಸೋಷಿಯಲ್ ಸ್ಟಡೀಸ್ ಸಂಸ್ಥೆ ನಡೆಸಿದ ಸಮೀಕ್ಷೆಯ ವರದಿ ಇದಾಗಿದೆ.

ಕಾಪ್ಸ್2017 ಸಮೀಕ್ಷೆ : ಬಿಜೆಪಿ 113, ಕಾಂಗ್ರೆಸ್ಸಿಗೆ 85 ಕ್ಷೇತ್ರಗಳು ಮತ್ತು 25 ಕ್ಷೇತ್ರಗಳು ಜೆಡಿಎಸ್ ಪಾಲಾಗಲಿವೆ.2008ರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ನೇತೃತ್ವದಲ್ಲಿ ನಡೆದಿದ್ದ ಚುನಾವಣೆಯಲ್ಲಿ ಸಿಕ್ಕ ಫಲಿತಾಂಶವೇ ಮರುಕಳಿಸಲಿದೆ ಎಂದು ಈ ಸಮೀಕ್ಷೆಯಲ್ಲಿ ಹೇಳಲಾಗಿದೆ.2008ರಲ್ಲಿ ಬಿಜೆಪಿ ಶೇ 33ರಷ್ಟು ಮತ ಗಳಿಕೆ ಮೂಲಕ 110, ಶೇ 35.1ರಷ್ಟು ಮತ ಗಳಿಕೆ ಮೂಲಕ ಕಾಂಗ್ರೆಸ್ 80, ಶೇ 19.44ರಷ್ಟು ಮತಗಳೊಂದಿಗೆ ಜೆಡಿಎಸ್ 28 ಸ್ಥಾನ ಗಳಿಸಿತ್ತು. ಇತರೆ 6 ಸ್ಥಾನಗಳು ಲಭಿಸಿತ್ತು.

ಯಾವ ಪ್ರದೇಶ ಯಾರ ಪಾಲು?

ಹಳೆ ಮೈಸೂರು ಭಾಗದ 37 ಕ್ಷೇತ್ರಗಳ ಪೈಕಿ ಸಿಎಂ ಸಿದ್ದರಾಮಯ್ಯ ಅವರ ಕಾಂಗ್ರೆಸï ಪಾಲಿಗೆ 21 ಕ್ಷೇತ್ರಗಳು ಹಾಗೂ ಬೆಂಗಳೂರಿನ 32 ಕ್ಷೇತ್ರಗಳ ಪೈಕಿ 16 ಒಲಿಯಲಿದೆ. ಬಿಜೆಪಿಗೆ 14, ಜೆಡಿಎಸ್ 2. ಕರಾವಳಿ , ಮುಂಬೈ ಕರ್ನಾಟಕ, ಹೈದರಾಬಾದ್ ಕರ್ನಾಟಕದಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡಲಿದೆ ಎಂದು ಸಮೀಕ್ಷೆ ಹೇಳಿದೆ.ಮಧ್ಯ ಕರ್ನಾಟಕದಲ್ಲಿ ಕಾಂಗ್ರೆಸï ಹಾಗೂ ಬಿಜೆಪಿ ಸಮಬಲ ಸಾಧಿಸಲಿದೆ. ಹೈದರಾಬಾದï ಕರ್ನಾಟಕ ಭಾಗದಲ್ಲಿ ಬಿಜೆಪಿಯು 25 ಸ್ಥಾನಗಳನ್ನು ಗೆಲ್ಲಲಿದೆ. ಮುಂಬೈ ಕರ್ನಾಟಕದಲ್ಲಿ 56 ಸ್ಥಾನಗಳ ಪೈಕಿ 36 ಗೆಲ್ಲಲಿದೆ. ಮಧ್ಯ ಕರ್ನಾಟಕದಲ್ಲಿ ಕಾಂಗ್ರೆಸï ಹಾಗೂ ಬಿಜೆಪಿ ಸಮಬಲ ಸಾಧಿಸಲಿವೆ ಎಂದು ಸಮೀಕ್ಷೆ ಹೇಳಿದೆ.

ಯಾವ ಅವಧಿಯಲ್ಲಿ ನಡೆದ ಸಮೀಕ್ಷೆ : 

ಜುಲೈ ತಿಂಗಳ ತನಕದ ಅಭಿಪ್ರಾಯ ಸಂಗ್ರಹಿಸಿ ಕಾಪ್ಸ್ ಸೆಪ್ಟೆಂಬರ್ ತಿಂಗಳಿನಲ್ಲಿ ವರದಿಯನ್ನು ನೀಡಿತ್ತು. ಈಗ ಅಕ್ಟೋಬರ್ ತನಕದ ಸಮೀಕ್ಷೆಯ ಫಲಿತಾಂಶವನ್ನು ನವೆಂಬರ್ 06ರಂದು ನೀಡಿದೆ. ಆಗಸ್ಟ್ ತಿಂಗಳ ರಾಜಕೀಯ ಬೆಳವಣಿಗೆ, ರಾಜಕೀಯ ನಾಯಕರ ಮೇಲಿನ ಕೇಸುಗಳು, ಚುನಾವಣೆ ತಯಾರಿ, ನಾಗರೀಕ ಸಮಸ್ಯೆಗಳ ಬಗ್ಗೆ ಜನಾಭಿಪ್ರಯ ಎಲ್ಲವೂ ಸಮೀಕ್ಷೆಯಲ್ಲಿ ಸೇರಿವೆ.

Facebook Comments

Sri Raghav

Admin