ಜಿಎಸ್‍ಟಿ ಎಂದರೆ ‘ಗ್ರೇಟ್ ಸೆಲ್ಫಿಶ್ ಟ್ಯಾಕ್ಸ್’

ಈ ಸುದ್ದಿಯನ್ನು ಶೇರ್ ಮಾಡಿ

DIDI-Mamata

ಕೋಲ್ಕತ, ನ.೭-ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸರಕು ಮತ್ತು ಸೇವೆ ತೆರಿಗೆ ಪದ್ಧತಿಯ ಕಡು ವಿರೋಧಿಗಳಲ್ಲಿ ಒಬ್ಬರಾದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಜಿಎಸ್‍ಟಿ ಎಂದರೆ ಜನರಿಗೆ ಕಿರುಕುಳ ನೀಡುವ ಮತ್ತು ಆರ್ಥಿಕತೆಯನ್ನು ನಾಶಗೊಳಿಸುವ ಗ್ರೇಟ್ ಸೆಲ್ಫಿಶ್ ಟ್ಯಾಕ್ಸ್ (ಮಹಾ ಸ್ವಾರ್ಥದ ತೆರಿಗೆ) ಎಂದು ಕಟುವಾಗಿ ಟೀಕಿಸಿದ್ದಾರೆ.

ನೋಟು ಅಮಾನ್ಯೀಕರಣ ಮತ್ತು ಜಿಎಸ್‍ಟಿ ಒಂದು ದೊಡ್ಡ ದುರಂತ ಎಂದು ಕೇಂದ್ರದ ವಿರುದ್ಧ ಹರಿಹಾಯ್ದ ತೃಣಮೂಲ ಕಾಂಗ್ರೆಸ್ ಪರಮೋಚ್ಚ ನಾಯಕಿ, ಇದರ ವಿರುದ್ಧ ನವೆಂಬರ್ 8ರಂದು ನಡೆಯಲಿರುವ ದೇಶವ್ಯಾಪಿ ಆಂದೋಲನದ ಹಿನ್ನೆಲೆಯಲ್ಲಿ, ತಮ್ಮ ವಿವರಗಳಿರುವ ಚಿತ್ರಗಳಿಗೆ ಕಪ್ಪು ಚೌಕಾ ಹಾಕುವ ಮೂಲಕ ಪ್ರತಿಭಟನೆ ಸಲ್ಲಿಸಬೇಕು ಎಂದು ಸಾಮಾಜಿಕ ಜಾಲತಾಣ ಬಳಕೆದಾರರಿಗೆ ಟ್ವೀಟರ್‍ನಲ್ಲಿ ಕರೆ ನೀಡಿದ್ದಾರೆ.

Facebook Comments

Sri Raghav

Admin