ಜೆಡಿಎಸ್ ವಿಕಾಸ ವಾಹಿನಿ ಕಡೂರಿನ ಕಡೆಗೆ

ಈ ಸುದ್ದಿಯನ್ನು ಶೇರ್ ಮಾಡಿ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕಡೂರು,ನ.07-ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದ ಕರ್ನಾಟಕ ವಿಕಾಸ ಯಾತ್ರೆ ಚಿಕ್ಕಮಗಳೂರು, ಸಖರಾಯಪಟ್ಟಣ ಮೂಲಕ ಕಡೂರು ಪಟ್ಟಣಕ್ಕೆ ನಾಳೆ ಬೆಳಗ್ಗೆ 10 ಗಂಟೆಗೆ ಆಗಮಿಸಲಿದೆ ಎಂದು ಕ್ಷೇತ್ರದ ಶಾಸಕ ವೈಎಸ್‍ವಿ ದತ್ತ ಅವರು ತಿಳಿಸಿದರು. ಈ ಸಂಜೆಯೊಂದಿಗೆಮಾತನಾಡಿದ ಅವರು, ಚಿಕ್ಕಮಗಳೂರು ಕ್ಷೇತ್ರದ ಮುಗುಳವಳ್ಳಿ ಗ್ರಾಮದ ಧರ್ಮಪಾಲ್ ಅವರ ಮನೆಯಲ್ಲಿ ಇಂದು ರಾತ್ರಿ ಕುಮಾರಸ್ವಾಮಿ ಅವರು ವಾಸ್ತವ್ಯ ಹೂಡಲಿದ್ದು, ನಾಳೆ (ನ.8) ಬೆಳಗ್ಗೆ 10 ಗಂಟೆಗೆ ಕಡೂರಿಗೆ ಆಗಮಿಸಲಿದೆ ಎಂದರು.

ಪಟ್ಟಣದ ಕನಕ ವೃತ್ತದಲ್ಲಿ ವಿಕಾಸ ಯಾತ್ರೆಯನ್ನು ಬರಮಾಡಿಕೊಂಡು ಸಾವಿರಾರು ಬೈಕ್‍ಗಳ ರ್ಯಾಲಿ ಮೂಲಕ ಪಟ್ಟಣದ ಮರವಂಜಿ ವೃತ್ತಕ್ಕೆ ಕರೆತಂದು ಅಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಎಚ್.ಡಿ.ಕುಮಾರಸ್ವಾಮಿ ಅವರು ಮಾತನಾಡಲಿದ್ದಾರೆ. ನಂತರ ಬಿರೂರಿಗೆ ತೆರಳಿ ಅಲ್ಲಿಯೂ ಸಾರ್ವಜನಿಕ ಸಭೆ ನಡೆಸಿ ಅನಂತರ ತರಿಕೆರೆಯಲ್ಲಿ ನಡೆಯಲಿರುವ ಸಮಾವೇಶಕ್ಕೆ ತೆರಳಲಿದ್ದಾರೆ ಎಂದು ಹೇಳಿದರು.
ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು, ಪಕ್ಷ ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಳ್ಳವಂತೆ ಶಾಸಕರು ಕೋರಿದರು.

Facebook Comments

Sri Raghav

Admin