ಟಿಪ್ಪು ಜಯಂತಿ ಆಚರಣೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್

high-court

ಬೆಂಗಳೂರು, ನ.7- ತೀವ್ರ ವಿವಾದಕ್ಕೀಡಾಗಿರುವ ಟಿಪ್ಪು ಜಯಂತಿ ಆಚರಣೆಗೆ ಉಚ್ಚ ನ್ಯಾಯಾಲಯ ಗ್ರೀನ್ ಸಿಗ್ನಲ್ ನೀಡಿದೆ. ನ.10ರಂದು ಸರ್ಕಾರ ಆಚರಿಸಲು ಮುಂದಾಗಿದ್ದ ಟಿಪ್ಪು ಜಯಂತಿಗೆ ತಡೆ ನೀಡಬೇಕೆಂದು ಕೋರಿ ಕೊಡಗಿನ ಮೂಲದ ಎಚ್.ಪಿ.ಮಂಜುನಾಥ್ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠದ ಹಂಗಾಮಿ ಮುಖ್ಯ ನ್ಯಾಯಾಧೀಶ ಎಚ್.ಜಿ.ರಮೇಶ್ ಅವರ ನ್ಯಾಯಪೀಠ ಈ ಹಂತದಲ್ಲಿ ಮಧ್ಯ ಪ್ರವೇಶಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದೆ.

Facebook Comments

Sri Raghav

Admin