ನೋಟು ಅಮಾನ್ಯೀಕರಣ ಸಂಘಟಿತ ಲೂಟಿ : ಮಾಜಿ ಪ್ರಧಾನಿ ಸಿಂಗ್ ವಾಗ್ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

Manamohan-Singh--01

ಅಹಮದಾಬಾದ್, ನ.7-ಕೇಂದ್ರ ಸರ್ಕಾರ ನೋಟು ಅಮಾನ್ಯೀಕರಣಗೊಳಿಸಿ ನಾಳೆಗೆ ಒಂದು ವರ್ಷ. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಮೇಲೆ ಮತ್ತೆ ದಾಳಿ ನಡೆಸಿರುವ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್, ಇದೊಂದು ಅತ್ಯಂತ ಬೇಜವಾಬ್ದಾರಿ ನಿರ್ಧಾರ ಮತ್ತು ಸಂಘಟಿತ ಲೂಟಿ ಎಂದು ಟೀಕಿಸಿದ್ದಾರೆ.
ವಿಧಾನಸಭೆ ಘೋಷಣೆಯಾಗಿರುವ ಗುಜರಾತ್ ಪ್ರವಾಸ ಕೈಗೊಂಡಿರುವ ಮಾಜಿ ಪ್ರಧಾನಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡರು. ನೋಟು ಅಮಾನ್ಯೀಕರಣದ ಯಾವ ಉದ್ದೇಶವೂ ಈಡೇರಿಲ್ಲ. ಅಲ್ಲದೇ ದೇಶಾದ್ಯಂತ ಜಾರಿಗೆ ಬಂದಿರುವ ಸರಕು ಮತ್ತು ಸೇವಾ ತೆರಿಗೆಯು ಸಣ್ಣ ವ್ಯಾಪಾರಿಗಳಿಗೆ ದುಸ್ವಪ್ನವಾಗಿವೆ ಎಂದು ಟೀಕಿಸಿದರು.

Facebook Comments

Sri Raghav

Admin