ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‍ಶಿಪ್ ನಲ್ಲಿ ಮೇರಿಕೋಮ್‍ಗೆ ಚಿನ್ನ

ಈ ಸುದ್ದಿಯನ್ನು ಶೇರ್ ಮಾಡಿ

Meri-Kom--02

ಹೋ ಚಿ ಮಿನ್ ಸಿಟಿ (ವಿಯೆಟ್ನಾಂ), ನ.8- ಐದು ಬಾರಿ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿರುವ ಭಾರತದ ಹೆಮ್ಮೆಯ ಬಾಕ್ಸರ್ ಎಂ.ಸಿ.ಮೇರಿ ಕೋಮ್ ಏಷ್ಯನ್ ಬಾಕ್ಸಿಂಗ್‍ನಲ್ಲೂ ಐದನೆ ಪ್ರಶಸ್ತಿ ಗೆದ್ದು ದೇಶದ ಗೌರವ ಹೆಚ್ಚಿಸಿದ್ದಾರೆ. ಫೈನಲ್ ಹಣಾಹಣಿಯಲ್ಲಿ ಒಲಂಪಿಕ್ ಕಂಚು ಪದಕ ವಿಜೇತ ಮೇರಿಕೋಂ ಉತ್ತರ ಕೊರಿಯಾದ ಚಿಮ್ ಹ್ಯಾಂಗ್ ಮಿ ಅವರನ್ನು ಮಣಿಸಿ ಚಿನ್ನದ ಪದಕ ಗೆದ್ದರು.

2014ರ ಏಷ್ಯನ್ ಗೇಮ್ ನಂತರ ಇದು ಮೇರಿಕೋಮ್‍ಗೆ ಮೊದಲ ಅಂತಾರಾಷ್ಟ್ರೀಯ ಬಂಗಾರದ ಪದಕವಾಗಿದೆ ಮತ್ತು ಈ ವರ್ಷದ ಚೊಚ್ಚಲ ಮೆಡಲ್ ಆಗಿದೆ. ಮಂಗಳವಾರ ನಡೆದ ಸೆಮಿಫೈನಲ್‍ನಲ್ಲಿ ಅವರು ಜಪಾನ್ ತ್ಸುಬಾಸ ಕೊಮುರ ಅವರನ್ನು 5-0ಯಿಂದ ಮಣಿಸಿ ಅಂತಿಮ ಹಣಾಹಣಿಗೆ ಪ್ರವೇಶಿಸಿದ್ದರು.

ಆರನೆ ಬಾರಿ ಫೈನಲ್ ಪ್ರವೇಶಿಸಿರುವ ಮೇರಿ ಚಿನ್ನ ಗೆಲ್ಲುವ ಮೂಲಕ ಏಷ್ಯನ್ ಚಾಂಪಿಯನ್‍ಶಿಪ್‍ನ 48 ಕೆಜಿ ವಿಭಾಗದಲ್ಲಿ ಮೊದಲ ಪ್ರಶಸ್ತಿ ಗಳಿಸಿದ ಸಾಧನೆ ಮಾಡಿದಂತಾಗಿದೆ. ಈ ಹಿಂದೆ ಅವರು 51 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದರು. ಸೆಮಿಫೈನಲ್ ಹಣಾಹಣಿಯಲ್ಲಿ ಮೇರಿ ಕೋಮ್ ಎದುರಾಳಿಯ ಮೇಲೆ ಪೂರ್ಣ ಆಧಿಪತ್ಯ ಸ್ಥಾಪಿಸಿದರು. ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದ ಮೇರಿ ಅವಕಾಶ ಲಭಿಸಿದಾಗಲೆಲ್ಲ ಪಾಯಿಂಟ್‍ಗಳನ್ನು ಕಲೆ ಹಾಕಿದ್ದರು.

Facebook Comments

Sri Raghav

Admin