ಐತಿಹಾಸಿಕ ನೋಟ್ ಬ್ಯಾನ್ ನಿರ್ಧಾರಕ್ಕೆ ಪ್ರಧಾನಿಗೆ ಟ್ವೀಟಿಗರಿಂದ ಧನ್ಯವಾದ

ಈ ಸುದ್ದಿಯನ್ನು ಶೇರ್ ಮಾಡಿ

Modi--001

ನವದೆಹಲಿ,ನ.8- ನೋಟು ಅಮಾನ್ಯಕ್ಕೆ ಇಂದು ಬುಧವಾರ ವರ್ಷ ತುಂಬಿದ್ದು, ಐತಿಹಾಸಿಕ ನಿರ್ಧಾರಬೆಂಬಲಿಸಿದ ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಧನ್ಯವಾದ ಹೇಳಿ ಟ್ವೀಟ್ ಮಾಡಿದ್ದಾರೆ. 125 ಕೋಟಿ ಜನರು ನಿರ್ಣಾಯಕ ಸಮರದಲ್ಲಿ ಹೋರಾಡಿ ಜಯ ಗಳಿಸಿದ್ದಾರೆಂದು ಟ್ವೀಟ್‍ನಲ್ಲಿ ಬರೆದಿದ್ದಾರೆ.
ನೋಟು ಅಮಾನ್ಯದಿಂದ ಆದ ಪ್ರಮುಖ ಬೆಳವಣಿಗೆಗಳ ಪಟ್ಟಿಯನ್ನೂ ಟ್ವೀಟ್ ಮಾಡಿರುವ ಪಿಎಂ ಮೋದಿ ಇದೊಂದು ಐತಿಹಾಸಿಕ ಮತ್ತು ಬಹು ಆಯಾಮದ ಯಶಸ್ಸು ಎಂದು ಬರೆದಿದ್ದಾರೆ.

ಪಟ್ಟಿಯಲ್ಲಿ ಬಿಂಬಿಸಲಾಗಿರುವ ನಾಲ್ಕು ಪ್ರಮುಖ ಸಾಧನೆಗಳೆಂದರೆ
*ಭೂಗತವಾಗಿದ್ದ ಅಪಾರ ಪ್ರಮಾಣದ ಕಪ್ಪು ಹಣ ಹೊರಬಂದಿದೆ.
*ಉಗ್ರವಾದ ಮತ್ತು ನಕ್ಸಲರಿಗೆ ನಿರ್ಣಾಯಕ ಹೊಡೆತ
*ಭಾರತದ ಹಣಕಾಸು ವ್ಯವಹಾರದಲ್ಲಿ ಭಾರೀ ಶುದ್ಧೀಕರಣ
*ಔಪಚಾರಿಕವಾಗಿ ಬಡವರಿಗೆ ಉತ್ತಮ ಉದ್ಯೋಗ ಸಿಗುವಂತೆ ಮಾಡಿದೆ. ಉದ್ಯೋಗಿಗಳ ಸಂಬಳ ನೇರವಾಗಿ ಖಾತೆಗಳಿಗೆ ಜಮೆ ಆಗುವಂತಾಗಿದೆ.

Facebook Comments

Sri Raghav

Admin